ಉಪ್ಪಳ: ಮಂಗಲ್ಪಾಡಿ ಕುಕ್ಕಾರ್‌ನಲ್ಲಿ ಹಲವು ವರ್ಷಗಳಿಂದ ಶ್ರೀರಾಮ ಸೈಕಲ್ ಅಂಗಡಿ ನಡೆಸುತ್ತಿದ್ದ ಪರಮೇಶ್ವರ ಶೆಟ್ಟಿಗಾರ್ (79) ನಿಧನ ಹೊಂದಿದರು. ಚೆರುಗೋಳಿ ಶ್ರೀರಾಮ ನಿಲಯ ನಿವಾಸಿಯಾದ ಇವರು ಇತ್ತೀಚೆಗಿನಿಂದ ನಯಾಬಜಾರ್‌ನಲ್ಲಿ ಸೈಕಲ್ ಅಂಗಡಿ ಆರಂಭಿಸಿದ್ದು, ಕಾರವಲ್ ಏಜೆಂಟ್ ಕೂಡಾ ಆಗಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ ಸುಂದರಿ, ಮಕ್ಕಳಾದ ಮಹಾಲಕ್ಷ್ಮಿ, ಉಷಾಕುಮಾರಿ, ಚಂದ್ರಕಲಾ, ಜಯರಾಮ, ರಾಮಕೃಷ್ಣ, ಅಳಿಯಂದಿರಾದ ಜಯರಾಮ, ಲೋಕೇಶ, ೭ಮಂದಿ ಸಹೋದರರು, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







