ಕಾಸರಗೋಡು: ಉದುಮ ನಂಬ್ಯಾರ್‌ಕೀಚಲ್‌ನಲ್ಲಿ ಅಬಕಾರಿ ದಳ ನಡೆಸಿದ ದಾಳಿಯಲ್ಲಿ ಆಟೋದಲ್ಲಿ ಸಾಗಿಸಲು ಯತ್ನಿಸಿದ 1.100 ಕಿಲೋ ಗ್ರಾಂ ಗಾಂಜಾ ಸೆರೆಹಿಡಿಯಲಾಗಿದೆ. ಘಟನೆಗೆ ಸಂಬಂಧಿಸಿ ಕೂಡ್ಲು ಚೌಕಿ ಆಜಾದ್‌ನಗರದ ಎಂ. ಅಹಮ್ಮದ್ ನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಹಾಗೂ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶಂಕೆ ತೋರಿದ ಅಬಕಾರಿ ಅಧಿಕಾರಿಗಳು ಆಟೋವನ್ನು ಪರಿಶೀಲಿಸಿ ಕಸ್ಟಡಿಗೆ ತೆಗೆದಿದ್ದು, ಆರೋಪಿ ವಿರುದ್ಧ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ.







