ಬದಿಯಡ್ಕ: ಮೂಲತಃ ಮೊಗ್ರಾಲ್ ಪುತ್ತೂರು ನಿವಾಸಿ ಹಾಗೂ ಈಗ ಬೇಳ ಸಮೀಪದ ಮಜೀರ್ಪಳ್ಳ ಕಟ್ಟೆಯಲ್ಲಿರುವ ರಾಘವ (56) ಕುಸಿದು ಬಿದ್ದು ನಿಧನ ಹೊಂದಿದರು. ಬೇಳ ಕೌಮುದಿ ನೇತ್ರಾಲಯದಲ್ಲಿ ಉದ್ಯೋಗಿಯಾಗಿ ದ್ದರು. ಮಾನ್ಯದ ತೋಟವೊಂದಕ್ಕೆ ತೆರಳಿದ ವೇಳೆ ಕುಸಿದು ಬಿದ್ದಿದ್ದಾರೆ ನ್ನಲಾಗಿದೆ. ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮೋಹಿನಿ, ಮಕ್ಕಳಾದ ನವಿನಾಶ್, ನವ್ಯ, ಸೊಸೆ ಮೀನಾಕ್ಷಿ, ಅಳಿಯ ಸಜಿತ್, ಸಹೋದರರಾದ ಮಣಿಕಂಠನ್, ಸುಧಾಕರನ್, ಉಮೇಶ್, ಬಾಲಕೃಷ್ಣ, ಚಂದ್ರಶೇಖರ, ಜಗದೀಶ್, ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







