ಕಾಸರಗೋಡು: ಪ್ಲಸ್‌ಟು ವಿದ್ಯಾರ್ಥಿಯೋರ್ವ ಕಿಟಿಕಿಯ ಸರಳಿಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರಿಯ ಕಾಲಿಯಡ್ಕ ನಿವಾಸಿಯೂ ಕಲ್ಯೋಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿ ವೈಶಾಖ್ (17) ಮೃತಪಟ್ಟ ಬಾಲಕ. ಇಂದು ಬೆಳಿಗ್ಗೆ ತಂದೆ ಕಮಲಾಕ್ಷ ಹಾಗೂ ತಾಯಿ ಸಿಂಧು ಕೆಲಸಕ್ಕೆ ತೆರಳಿದ್ದರು. ಇನ್ನೋರ್ವ ಸಹೋದರನಾದ ವೈಷ್ಣವ್ ಎದ್ದು ನೋಡಿದಾಗ ವೈಶಾಖ್ ನಿದ್ರಿಸಿದ್ದ ಕೊಠಡಿಯ ಬಾಗಿಲು ಮುಚ್ಚುಗಡೆ ಗೊಂಡಿರುವುದು ಕಂಡುಬಂದಿದೆ. ಬಾಗಿಲು ತೆರೆದು ನೋಡಿದಾಗ ವೈಶಾಖ್ ಕಿಟಿಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ವೈಶಾಖ್ ನಿನ್ನೆ ಶಾಲೆಗೆ ತೆರಳಿ ಪರೀಕ್ಷೆಗೆ ಹಾಜರಾಗಿದ್ದನು. ಯಾಕಾಗಿ ಈತ ಆತ್ಮಹತ್ಯೆಗೈದಿದ್ದಾನೆಂದು ತಿಳಿದುಬಂದಿಲ್ಲ. ವೈಶಾಖ್‌ನ ತಂದೆ ಪೆರಿಯ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ. ಘಟನೆ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







