ಕರ್ನಾಟಕ ಬ್ಯಾಂಕ್‌ನ ಮಂಗಲ್ಪಾಡಿ ಶಾಖೆಯಲ್ಲಿ ಅಡವಿರಿಸಿದ 227 ಗ್ರಾಂ ಚಿನ್ನ ನಕಲಿ ಚಿನ್ನವಾಗಿ ಮಾರ್ಪಾಡು: ಪೊಲೀಸ್ ತನಿಖೆ ಆರಂಭ

ಉಪ್ಪಳ: ಕರ್ನಾಟಕ ಬ್ಯಾಂಕ್‌ನ ಮಂಗಲ್ಪಾಡಿ ಶಾಖೆಯಲ್ಲಿ ಅಡವಿರಿಸಿದ 227 ಗ್ರಾಂ ಚಿನ್ನ ನಕಲಿ ಚಿನ್ನವಾಗಿ ಬದಲಾಗಿದೆ. ಅಡವಿರಿಸಿದ ಚಿನ್ನವನ್ನು ಮರಳಿ ಪಡೆಯಲು ತಲುಪಿದಾಗ ಈ ವಿದ್ಯಮಾನ ಬೆಳಕಿಗೆ ಬಂದಿದೆ. ಈ ಬಗ್ಗೆ ಕರ್ನಾಟಕ ಬ್ಯಾಂಕ್‌ನ ಮಂಗಳೂರು ಡೆಪ್ಯುಟಿ ರೀಜ್ಯನಲ್ ಹೆಡ್ ಶ್ರೀಶ ಎಂಬವರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನವೆಂಬರ್ 26 ಹಾಗೂ ಡಿಸೆಂಬರ್ 6ರ ಮಧ್ಯೆ ಅಡವಿರಿಸಿ 31,50,066 ರೂಪಾಯಿ ಸಾಲ ಪಡೆದ ಚಿನ್ನ ನಕಲಿ ಚಿನ್ನವಾಗಿ ಬದಲಾಗಿದೆ. ಯಥಾರ್ಥ ಚಿನ್ನವನ್ನು ಬದಲಿಸಿ ನಕಲಿ ಚಿನ್ನವನ್ನು ಇರಿಸಿ ವಂಚನೆ ನಡೆಸಲಾಗಿದೆ. ಮಂಜೇಶ್ವರ ಪೊಲೀಸರು ತನಿಖೆಯಂಗವಾಗಿ ಬ್ಯಾಂಕ್‌ನ ಇಬ್ಬರು ನೌಕರರನ್ನು ತನಿಖೆಗೊಳಪಡಿಸಿದ್ದಾರೆ. ಈ ಪೈಕಿ ಓರ್ವ ಪೊಲೀಸ್‌ನ ನಿಗಾದಲ್ಲಿದ್ದಾನೆ.

RELATED NEWS

You cannot copy contents of this page