ಜಿಲ್ಲಾ ಶಾಲಾ ಕಲೋತ್ಸವ: ಮೊಗ್ರಾಲ್‌ನಲ್ಲಿ ಪೊಲೀಸ್ ಕಾವಲು; ಶಾಂತಿಗೆ ಭಂಗವುಂಟುಮಾಡಿದರೆ ಕಠಿಣ ಕ್ರಮ-ಮುನ್ನೆಚ್ಚರಿಕೆ

ಕುಂಬಳೆ: ಜಿಲ್ಲಾ ಶಾಲಾ ಕಲೋತ್ಸ ವಕ್ಕೆ ಮೊಗ್ರಾಲ್‌ನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ತಿಂಗಳ 29ರಿಂದ ಮೊಗ್ರಾಲ್ ಜಿವಿಎಚ್‌ಎಸ್ ಎಸ್‌ನಲ್ಲಿ  ಕಲೋತ್ಸವ ನಡೆಯಲಿದೆ. ಕಲೋತ್ಸವ ವನ್ನು ಅದ್ದೂರಿಯಿಂದ ನಡೆಸಲು ಒಂದೆಡೆ ಸಂಘಾಟಕ ಸಮಿತಿ  ತಯಾರಿ ಯಲ್ಲಿ ನಿರತಗೊಂ ಡಿದ್ದು, ಇದರ ಜತೆಗೆ ಕಲೋತ್ಸವ ಯಶಸ್ವಿಯಾಗಿ, ಶಾಂತಿ ಯುತವಾಗಿ ನಡೆಯುವಂತಾ ಗಲು ಪೊಲೀಸರು ಈಗಾಗಲೇ ಅಗತ್ಯದ ಕ್ರಮ ಕೈಗೊಂಡಿದ್ದಾರೆ.  ಶಾಲೆಯಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.  ಕಲೋ ತ್ಸವ ದಿನಗಳಂದು ೨೦೦ರಷ್ಟು ಪೊಲೀ ಸನ್ನು ಶಾಲೆಯ ಸುತ್ತಮುತ್ತ ನೇಮಿಸಲಾ ಗುವುದು. ಮಾತ್ರವಲ್ಲದೆ ಶಾಲಾ ಪರಿಸರದಲ್ಲಿ ಗುಪ್ತವಾಗಿ ಸಿಸಿ ಕ್ಯಾಮರಾ ಸ್ಥಾಪಿಸಲು ನಿರ್ಧರಿಸಿದ್ದು, ಪ್ರತಿಯೊಬ್ಬರ ಚಲನವಲನಗಳನ್ನು ಕೂಲಂಕುಶವಾಗಿ ನಿಗಾ ಇರಿಸಲಾಗುವುದು. ಶಾಡೋ ಪೊಲೀಸ್ ಹಾಗೂ ಮಫ್ತಿ ವೇಷದಲ್ಲಿ ಪೊಲೀಸರು ಎಲ್ಲಾ ವೇದಿಕೆಗಳ ಸಮೀಪ ನಿಗಾ ಇರಿಸಲಿದ್ದಾರೆ. ಕಳೆದ ಬಾರಿ ಶಾಲಾ ಕಲೋತ್ಸವ ವೇಳೆ ಉಂಟಾದ ಘರ್ಷಣೆ ಯನ್ನು ಪರಿಗಣಿಸಿ ಈ ಬಾರಿ ಜಿಲ್ಲಾ ಶಾಲಾ ಕಲೋತ್ಸವ ವೇಳೆ ಗರಿಷ್ಠ ಜಾಗ್ರತೆ ವಹಿಸಲು ನಿರ್ಧರಿಸಲಾಗಿದೆ. ಕಲೋ ತ್ಸವಕ್ಕೆ ಯಾರಾದರೂ ಅಡ್ಡಿ ಪಡಿಸಲು, ಘರ್ಷಣೆ ಸೃಷ್ಟಿಸಲು ಯತ್ನಿಸಿದರೆ ಅವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗುವುದೆಂದು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಕೆ. ಶ್ರೀಜೇಶ್ ತಿಳಿಸಿದ್ದಾರೆ.

RELATED NEWS

You cannot copy contents of this page