ಕಾಸರಗೋಡು: ಕಾಸರಗೋಡು ನಗರಸಭೆಗೆ 33ನೇ ವಾರ್ಡ್ನಿಂದ ಸ್ಪರ್ಧಿಸಿ ಜಯಗಳಿಸಿದ ಕೆ.ಎನ್. ರಾಮಕೃಷ್ಣ ಹೊಳ್ಳರ ವಿಜಯೋತ್ಸವ ಮೆರವಣಿಗೆ ನಗರದಲ್ಲಿ ನಡೆಯಿತು. ಮತದಾರರ ಮನೆಗೆ ತೆರಳಿ ಸಿಹಿ ಹಂಚಲಾಯಿತು. ಕೆ.ಎನ್. ವೆಂಕಟ್ರ ಮಣ ಹೊಳ್ಳ, ನಗರಸಭಾ ಮಾಜಿ ಸದಸ್ಯೆ ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಕೆ.ವಿ. ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್, ಸಂತೋಷ್ ಭಂಡಾರಿ, ವಸಂತ್ ಕೆರೆಮನೆ, ಜಿತಿನ್ರಾಜ್ ಶೆಟ್ಟಿ, ಭರತ್ರಾಜ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದರು. ಕೆ.ವಿ. ತಿರುಮಲೇಶ ಹೊಳ್ಳ, ಕೆ.ವಿ. ಶೇಷಾದ್ರಿ ಹೊಳ್ಳ, ಪ್ರಜ್ವಲ್, ಅನುರಾಜ್ ನಾಸಿಕ್ ಬ್ಯಾಂಡ್ಗೆ ನೇತೃತ್ವ ನೀಡಿದರು.







