ಕಾಸರಗೋಡು: ಆನೆಬಾಗಿಲು ನಿವಾಸಿ ಗಣೇಶ ಆಚಾರ್ಯ (62) ನಿನ್ನೆ ನಿಧನ ಹೊಂದಿದರು. ಇವರು ವಿಶ್ವಕರ್ಮ ಯುವಕಸಂಘದ ಕಾರ್ಯ ದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡಿನಲ್ಲಿ ಭಜನಾಮಂದಿರ, ಕಲ್ಯಾಣ ಮಂಟಪ ಯೋಜನೆಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶ್ರೀವಳ್ಳಿ (ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದ ಮುಖ್ಯೋಪಾ ಧ್ಯಾಯಿನಿ), ಮಕ್ಕಳಾದ ಶ್ರೇಷ್ಠ, ವರ್ಷ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಕಾಸರಗೋಡು ಶ್ರೀ ವಿಶ್ವಬ್ರಾಹ್ಮಣ ಸಮಾಜಸೇವಾಸಂಘ, ಶ್ರೀ ವಿಶ್ವಕರ್ಮ ಯುವಕಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಸಂತಾಪ ಸೂಚಿಸಿದೆ.






