ಮಂಜೇಶ್ವರ ಮಂಡಲದಲ್ಲಿ ಯುಡಿಎಫ್ ಆಕ್ರಮಣ: ನಿಲ್ಲಿಸದಿದ್ದರೆ ಪ್ರತಿಭಟನೆಗೆ ಮುಂದಾಗುವುದಾಗಿ ಎಲ್‌ಡಿಎಫ್

ಮಂಜೇಶ್ವರ: ಚುನಾವಣೆ ಕಳೆದ ಬಳಿಕ ಮಂಜೇಶ್ವರ ಮಂಡಲದ ವಿವಿಧ ಪ್ರದೇಶಗಳಲ್ಲಿ ಐಕ್ಯರಂಗದ ನೇತೃತ್ವದಲ್ಲಿ ಎಡರಂಗ ಕಾರ್ಯಕರ್ತರ ವಿರುದ್ಧ ಆಕ್ರಮಣ ನಡೆಸಲಾಗುತ್ತಿರುವುದಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ಮಂಜೇಶ್ವರದ ಶಾಸಕರ ಬೆಂಬಲದೊಂದಿಗೆ ಈ ತಂಡ ವಿನಾಕಾರಣ ಆಕ್ರಮಣ ನಡೆಸುತ್ತಿರು ವುದಾಗಿ ಅವರು ದೂರಿದ್ದು, ಜನಪ್ರತಿನಿಧಿ ಗಳು ಈ ರೀತಿಯ ಆಕ್ರಮಣಗಳಿಗೆ ನೇತೃತ್ವ ನೀಡುತ್ತಿರುವುದು ಈ ಪರಿಸರದ ಜನರ ನೆಮ್ಮದಿಯನ್ನು ಹಾಳುಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರದೇಶದಲ್ಲಿ ಗೂಂಡಾ ರಾಜ್ಯ ಸ್ಥಾಪಿಸಲು ಮುಸ್ಲಿಂ ಲೀಗ್ ತಂತ್ರ ಹೂಡುತ್ತಿರುವುದಾಗಿಯೂ ಅವರು ಗಂಭೀರ ಆರೋಪ ಹೊರಿಸಿದ್ದಾರೆ. ಗರ್ಭಿಣಿ ಮಹಿಳೆ ಸಹಿತವಿರುವ ಮನೆಗೆ ನುಗ್ಗಿ ಪಟಾಕಿ ಸಿಡಿಸಿ ಹೆಣ್ಣುಮಕ್ಕಳ ಮೇಲೆ  ಆಕ್ರಮಣ ನಡೆಸಿರುವುದು ಶಿರಿಯ ಪ್ರದೇಶದಲ್ಲಿ ಶಾಂತಿಭಂಗ ಉಂಟುಮಾಡುವುದಕ್ಕಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆಕ್ರಮಣದಿಂದ ಹಿಂದೆ ಸರಿಯದಿದ್ದರೆ ಜನರನ್ನು ಸೇರಿಸಿಕೊಂಡು ಸಿಪಿಎಂ ಪ್ರತಿಭಟನೆಗೆ ನೇತೃತ್ವ ನೀಡಲಿದೆ ಎಂದು ಕೆ.ಆರ್. ಜಯಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page