ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಂಡುಬರುವ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಆಯೋಗದ ನೇತೃತ್ವದಲ್ಲಿ ಯೋಜನೆ ಗಳನ್ನು ಆವಿಷ್ಕರಿಸಲಾಗುವುದೆಂದು ಕೇರಳ ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ. ಕುಂಞಾಯಿಷ ನುಡಿ ದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅದಾಲತ್‌ನಲ್ಲಿ ದೂರು ಆಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾ ಡುತ್ತಿದ್ದರು. ಇದರ ಮುಂಚಿತವಾಗಿ ಸಮಸ್ಯೆಗಳನ್ನು ತಿಳಿದು ನಿರ್ದೇಶಗಳನ್ನು ಸಮರ್ಪಿಸುವುದಕ್ಕಾಗಿ ಜನವರಿಯಿಂದ ವಿಚಾರಗೋಷ್ಠಿಗಳನ್ನು ಆರಂಭಿಸುವು ದಾಗಿಯೂ ಅವರು ನುಡಿದರು.
ಮಹಿಳೆಯರ ವಿರುದ್ಧವಿರುವ ಆಕ್ರಮಣವನ್ನು ತಡೆಯುವುದಕ್ಕೆ ಪ್ರಯಾಣ ವೇಳೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಭದ್ರತೆ ಖಚಿತಪಡಿಸಬೇಕೆಂದು ಅವರು ನುಡಿದರು. ಕೆಲವು ಶಕ್ತಿಗಳು ಅರಾಜಕತ್ವವನ್ನು ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಸಂದೇಶ ಹಾಕುವುದನ್ನು ತಡೆಯಲು ಉದ್ದೇಶಿಸಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ರೀತಿಯ ಅಪರಾಧ ಕೃತ್ಯಗಳನ್ನು ನಡೆಸುವವರು ತಾಂತ್ರಿಕ ಕಾರಣಗಳಿಂದ ಪಾರಾಗುತ್ತಾರೆ. ಈ ರೀತಿಯ ಚಟುವಟಿಕೆಗಳನ್ನು ಪ್ರತಿಭಟಿಸುವುದಾಗಿ ಅವರು ನುಡಿದರು. ಆರ್ಥಿಕ ವಿಷಯಗಳು, ವಿವಾಹ ಭರವಸೆ ಮಾಡಿ ಶೋಷಣೆ, ವಿವಾಹೇತರ ಸಂಪರ್ಕ ಮೂಲಕ ವಿವಾದ ಮೊದ ಲಾದ ವಿಷಯಗಳಲ್ಲಿ 37 ದೂರುಗಳನ್ನು ಅದಾಲತ್‌ನಲ್ಲಿ ಆಲಿಸಲಾಯಿತು. ಇದರಲ್ಲಿ 7 ದೂರುಗಳಿಗೆ ಪರಿಹಾರ ವುಂಟಾಗಿದೆ. 5 ದೂರುಗಳಲ್ಲಿ ಪೊಲೀ ಸರ ಹಾಗೂ 3 ದೂರುಗಳಲ್ಲಿ ಜಾಗೃತಾ ಸಮಿತಿಯ ವರದಿ ಆಗ್ರಹಿಸಲಾಗಿದೆ. 1 ದೂರನ್ನು ಜಿಲ್ಲಾ ಲೀಗಲ್ ಸರ್ವೀಸ್ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. 21 ದೂರುಗಳನ್ನು ಮುಂದಿನ ಸಿಟ್ಟಿಂಗ್‌ಗೆ ಮುಂದೂಡಲಾಗಿದೆ. ನ್ಯಾಯವಾದಿ ಎಂ. ಇಂದಿರಾವತಿ, ಜಿಲ್ಲಾ ಕ್ರೈಮ್ ಬ್ರಾಂಚ್ ಡೆಪ್ಯುಟಿ ಸುಪರಿಂಟೆಂಡೆಂಟ್ ಉತ್ತಮ್ ದಾಸ್, ಕಾಸರಗೋಡು ವನಿತಾ ಸೆಲ್ ಸಬ್ ಇನ್ಸ್‌ಪೆಕ್ಟರ್ ಎಂ.ವಿ. ಶರಣ್ಯ, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಕೆ.ವಿ. ಚಂದ್ರಿಕ ಭಾಗವಹಿಸಿದರು.






