ಪಿಣರಾಯಿಯಲ್ಲಿ ಸ್ಫೋಟ ಉಂಟಾಗಿರುವುದು ರೀಲ್ಸ್ ಚಿತ್ರೀಕರಣ ವೇಳೆ

ಕಣ್ಣೂರು: ಪಿಣರಾಯಿಯಲ್ಲಿ ಇತ್ತೀಚೆಗೆ ಉಂಟಾದ ಸ್ಫೋಟ ರೀಲ್ಸ್ ಚಿತ್ರೀಕರಣ ವೇಳೆ ನಡೆದಿರುವುದಾಗಿ  ಹೇಳ ಲಾಗುತ್ತಿದೆ.  ವಿಪಿನ್‌ರಾಜ್ ಎಂಬಾತನ ಕೈಯಲ್ಲಿ ಸ್ಫೋಟಕ ವಸ್ತು ಸಿಡಿದಿದ್ದು, ಇದು ರೀಲ್ಸ್ ಚಿತ್ರೀಕರಣ ವೇಳೆ ಸಂಭವಿಸಿ ದೆಯೆಂಬುವುದನ್ನು ಸಾಬೀತುಪಡಿಸುವ ದೃಶ್ಯಗಳು ಲಭಿಸಿರುವುದಾಗಿ ವರದಿ ಯಾಗಿದೆ. ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ ಬಳಿಕ ಅದನ್ನು ಎಸೆಯಲು ಯತ್ನಿಸುತ್ತಿದ್ದಾಗ ಅದು ಕೈಯಲ್ಲೇ ಸಿಡಿದಿರುವುದು ದೃಶ್ಯದಲ್ಲಿದೆಯೆನ್ನಲಾಗುತ್ತಿದೆ. ಸ್ಫೋಟದಿಂದ ಕೈಗೆ ಗಂಭೀರ ಗಾಯಗೊಂಡಿರುವ ವಿಪಿನ್ ರಾಜ್ ಪ್ರಸ್ತುತ ಆಸ್ಪತ್ರೆಯಲ್ಲಿದ್ದಾನೆ. ಕಳೆದ ಮಂಗಳವಾರ ಮಧ್ಯಾಹ್ನ ಪಿಣರಾಯಿ ಕನಾಲ್‌ಕರ ಎಂಬಲ್ಲಿ ಘಟನೆ ನಡೆದಿದೆ. ನಾಡಬಾಂಬ್ ಸ್ಫೋಟಗೊಂಡು  ಯುವಕನ ಕೈಗೆ ಗಂಭೀರ ಗಾಯಗೊಂಡಿರುವುದಾಗಿ ಮೊದಲು ವರದಿಯಾಗಿತ್ತು. ಆದರೆ  ಓಲೆ ಪಟಾಕಿ ಸಿಡಿಸುವಾಗ ದುರ್ಘಟನೆ ಯುಂಟಾಗಿರುವುದಾಗಿ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರಲ್ಲಿ ವಿಪಿನ್ ರಾಜ್ ತಿಳಿಸಿದ್ದನು. ಘಟನೆಗೆ ಸಂಬಂಧಿಸಿ ಸಿಪಿಎಂ ಕಾರ್ಯ ಕರ್ತನಾದ ವಿಪಿನ್ ರಾಜ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಈ ಹಿಂದೆ ಕಾಪಾ ಕಾಯ್ದೆ ಪ್ರಕಾರ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪಿಣರಾಯಿಯಲ್ಲಿ ಉಂಟಾದ ಸ್ಫೋಟದ ಬಳಿಕ ರಾಜಕೀಯವಾಗಿ   ಭಾರೀ ವಿವಾದವೂ ಸೃಷ್ಟಿಯಾಗಿದೆ.  ಆದರೆ ಪಟಾಕಿ ಸಿಡಿಸುವ ವೇಳೆ ದುರ್ಘಟನೆ ಯುಂಟಾಗಿರುವುದಾಗಿ ಪಿಣರಾಯಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page