ಕಾಸರಗೋಡು: ಮರ ಕಡಿಯುತ್ತಿದ್ದ ವೇಳೆ ಅದರ ರೆಂಬೆ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಬಂದಡ್ಕಕ್ಕೆ ಸಮೀಪದ ಕರಿವೇಡಗಂನ ಅಜಿ-ಅನಿತ ದಂಪತಿ ಪುತ್ರ ಸಜೋ ಅಜಿ (24) ಸಾವನ್ನಪ್ಪಿದ ಯುವಕ. ರೆಂಬೆ ದೇಹದ ಮೇಲೆ ಬಿದ್ದು ಗಂಭೀರ ಗಾಯಗೊಂಡ ಸಜೋ ಅಜಿಯನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಆತ ನಿಧನಹೊಂದಿದನು. ಮೃತನು ಹೆತ್ತವರ ಹೊರತಾಗಿ ಸಹೋದರ ಸಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






