ಬಿದ್ದು ಸಿಕ್ಕಿದ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಟ್ಟು ಮೂಲ್ಯ

ಬಾಯಾರು: ದಾರಿಯಲ್ಲಿ ಬಿದ್ದು ಸಿಕ್ಕಿದ ೨ ಪವನ್‌ನ ಚಿನ್ನದ ಕಾಲ್ಗೆಜ್ಜೆಯನ್ನು ವಾರಸುದಾರಳಿಗೆ ಹಿಂತಿರುಗಿಸಿ ಕೂವೆತ್ತೋಡಿ ನಿವಾಸಿ ಬಟ್ಟು ಮೂಲ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರು ನಡೆದು ಹೋಗುತ್ತಿದ್ದಾಗ ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ಅದರ ವಾರಿಸು ದಾರರನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಇವರ ಪ್ರಾಮಾಣಿಕತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕನಿಯಾಲ ಪಳ್ಳಿತ್ತಡ್ಕ ನಿವಾಸಿಯಾದ ಮಹಿಳೆಯೋರ್ವರ ಆಭರಣ ಇದಾಗಿತ್ತೆಂದು ಅವರು ತಿಳಿಸಿದ್ದಾರೆ.

RELATED NEWS

You cannot copy contents of this page