ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರು ಕಲೆಕ್ಟ್ರೇಟ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಭಾಷಾ ವೈವಿಧ್ಯಮಯ ಕಂಪು ಮೆರೆಯಿತು.
ಜಿಲ್ಲಾ ಪಂಚಾಯತ್‌ಗೆ ಆರಿಸಲ್ಪಟ್ಟ ಸದಸ್ಯರು ತಮ್ಮ ಮಾತೃಭಾಷೆಯಲ್ಲೇ ಪ್ರಮಾಣವಚನ ಸ್ವೀಕರಿಸಿದರೆ, ಕೆಲವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಲವರು ಕನ್ನಡ, ತುಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಸಪ್ತಭಾಷಾ ಸಂಗಮ ಭೂಮಿಯ ವೈವಿದ್ಯತೆಯನ್ನು ಸಾರಿದರು.
ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಷನ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಹಿರಿಯ ಸದಸ್ಯರಾದ ರಾಮಪ್ಪ ಮಂಜೇಶ್ವರರಿಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಮೊದಲು ಪ್ರಮಾಣವಚನ ಬೋಧಿಸಿದರು. ನಂತರ ಜಿಲ್ಲಾ ಪಂಚಾಯತ್‌ನ ಇತರ 17 ಮಂದಿ ಸದಸ್ಯರುಗಳಿಗೆ ರಾಮಪ್ಪ ಮಂಜೇಶ್ವರ ಪ್ರಮಾಣವಚನ ಬೋಧಿಸಿದರು. ಆ ಮೂಲಕ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಎಲ್ಲಾ ಸದಸ್ಯರೂ ವಿದ್ಯುಕ್ತವಾಗಿ ತಮ್ಮ ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪಂಚಾಯತ್‌ನ ಒಟ್ಟು 18 ಡಿವಿಷನ್‌ಗಳಲ್ಲಿ ೯ರಲ್ಲಿ ಎಡರಂಗ, ೮ರಲ್ಲಿ ಐಕ್ಯರಂಗ ಹಾಗೂ ಒಂದರಲ್ಲಿ ಎನ್‌ಡಿಎ ಗೆದ್ದುಕೊಂಡಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕಾರ್ಯ ಕರ್ತರು ಹಾಗೂ ಗೆದ್ದ ಸದಸ್ಯರುಗಳು ಕುಟುಂಬ ಸದಸ್ಯರೂ ಭಾಗವಹಿಸಿದರು.







