ಕುಂಬಳೆಯಲ್ಲಿ ಬಹುಮತ ಗಳಿಸಿದ ಮುಸ್ಲಿಂ ಲೀಗ್: ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿ

ಕುಂಬಳೆ:  ಪಂಚಾಯತ್ ಚುನಾ ವಣೆಯಲ್ಲಿ ಕುಂಬಳೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ  ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷರಾಗಿ ಯಾರನ್ನು ಆರಿಸಬೇಕೆಂಬ ವಿಷಯ ಗೊಂದಲಕ್ಕೀ ಡಾಗಿದೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿಯೂ, ಎರಡುಬಾರಿ ಪಂಚಾಯತ್ ಸದಸ್ಯ, ಒಂದು ಬಾರಿ ಬ್ಲೋಕ್ ಪಂಚಾಯತ್ ಸದಸ್ಯನಾಗಿದ್ದ ಎ.ಕೆ. ಆರಿಫ್ ಈ ಬಾರಿಯೂ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್, ಜಿಲ್ಲಾ ಸಮಿತಿ ಸದಸ್ಯ ಎಂಬೀ ನೆಲೆಗಳಲ್ಲಿ ಕಾರ್ಯಾಚರಿಸುವ ವಿ.ಪಿ. ಅಬ್ದುಲ್ ಖಾದರ್ ಹಾಜಿ  ಎರಡು ಬಾರಿ ಪಂಚಾಯತ್ ಸದಸ್ಯನಾಗಿ, ಒಂದು ಬಾರಿ  ಬ್ಲೋಕ್ ಸದಸ್ಯನಾಗಿಯೂ  ಆಯ್ಕೆಯಾಗಿದ್ದಾರೆ. ಎಂ.ಪಿ. ಖಾಲಿದ್ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಜೊತೆ ಕಾರ್ಯದರ್ಶಿಯಾಗಿದ್ದಾರೆ. ಇವರು ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಮೊದಲೇ ಅಧ್ಯಕ್ಷ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುವುದಾಗಿ ಪ್ರಚಾರ ಉಂ ಟಾಗಿತ್ತು. ಈ ಮೂರು ಮಂದಿಯೂ ಪಕ್ಷದವರಿಗೆ ಹಾಗೂ ನಾಗರಿಕರಿಗೆ  ಪರಿಚಿತರಾಗಿದ್ದಾರೆ. ಮೂರು ಮಂದಿ ಯನ್ನು ಪಕ್ಷದವರು  ಗೌರವಿಸುತ್ತಾರೆ. ಆದರೆ ಎಂ.ಪಿ. ಖಾಲಿದ್‌ರೊಂದಿಗೆ ಪಕ್ಷದ ಕಾರ್ಯಕರ್ತರಿಗೆ  ಗೌರವ ಸ್ವಲ್ಪ ಹೆಚ್ಚಿದೆಯೇ ಎಂಬ ಸಂಶಯ ಎಲ್ಲರಲ್ಲೂ ಇದೆ. ಅಧಿಕಾರ, ಸ್ಥಾನಗಳ  ಚಟುವಟಿಕೆ ಅದಕ್ಕಿರುವ ನಿಯಮ, ನಿರ್ದೇಶಗಳು ಅಧಿಕಾರ ಸ್ಥಾನ ವಹಿಸುವವರ ನಿಲುವು ಏನೆಂದು ವಿವಿಧ ಅಧಿಕಾರ ಕೇಂದ್ರಗಳಲ್ಲಿ ಕಾರ್ಯಾಚರಿಸಿದ ಆರಿಫ್‌ರಿಗೆ ಹಾಗೂ ಅಬ್ದುಲ್ ಖಾದರ್ ಹಾಜಿಗೆ ತಿಳಿದಿದೆ ಯೆಂದು ನಾಗರಿಕರು ಹೇಳುತ್ತಿದ್ದಾರೆ. ಅದೇ ರೀತಿ ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂದು, ಜನರಿಗೆ ಹೇಗೆ ನ್ಯಾಯ ದೊರಕಿಸಬೇಕೆಂದು ಎಂ.ಪಿ. ಖಾಲಿದ್‌ರಿಗೆ ತಿಳಿದಿದೆಯೆಂದೂ ಹೇಳಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನ ಜನರಲ್ ಆಗಿರುತ್ತಿದ್ದಲ್ಲಿ ಒಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿ ಸಮಸ್ಯೆ ಪರಿಹರಿಸಬಹುದಾಗಿತ್ತು. ಆದರೆ ಪಂಚಾ ಯತ್ ಉಪಾಧ್ಯಕ್ಷ ಸ್ಥಾನ ಕುಂಬಳೆ ಯಲ್ಲಿ ಮಹಿಳಾ ಮೀಸಲಾತಿಯಾಗಿದೆ.  ಆ ಸ್ಥಾನಕ್ಕೆ  ಅಭ್ಯರ್ಥಿಯನ್ನು ನೇಮಿಸ ಬೇಕಾದ ಹೊಣೆಗಾರಿಕೆ ಪಕ್ಷಕ್ಕಿದೆ. ಪಕ್ಷದ ಪದಾಧಿಕಾರಿ ಸ್ಥಾನ ಹಾಗೂ ಅಧಿಕಾರ ಸ್ಥಾನಗಳನ್ನು ಒಬ್ಬರೇ ನಿರ್ವಹಿಸುವುದು ಸೂಕ್ತವಲ್ಲವೆಂದು ಹೇಳಲಾಗುತ್ತಿದೆ. ಎರಡು ಸ್ಥಾನವನ್ನು ಒಬ್ಬರು ವಹಿಸುವಾಗ ಅವರ ಹಾಗೂ ಪಕ್ಷದ ಹಿತಾಸಕ್ತಿಗಳನ್ನು ಸಂರಕ್ಷಿಸ ಬೇಕಾಗಿ ಬರಲಿದೆ. ಹಾಗಾದಲ್ಲಿ ಅದು ಕೆಲವೊಮ್ಮೆ ಜನರ ಹಿತಾಸಕ್ತಿಗೆ ವಿರುದ್ಧ ವಾಗುವ ಸಾಧ್ಯತೆ ಇದೆಯೆಂದು ಭಾವಿಸುವವರಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರನ್ನು ಅಧ್ಯಕ್ಷರಾಗಿ ಆಯ್ಕೆಮಾಡಬೇಕು, ಯಾರನ್ನು ಕೈಬಿಡಬೇಕೆಂಬ ಸಂದಿಗ್ದ ಸ್ಥಿತಿಯನ್ನು ಕುಂಬಳೆಯಲ್ಲಿ ಪಕ್ಷದ ನಾಯಕತ್ವ ಎದುರಿಸುತ್ತಿದೆ. ರಾಜ್ಯ ನಾಯಕತ್ವ ಮಧ್ಯಸ್ಥಿಕೆ ವಹಿಸಿದರೆ ಪ್ರಾದೇಶಿಕ ನೇತಾರರಿಗೆ ಈ ಗೊಂದಲದಿಂದ ಪಾರಾಗಬಹುದು. ಆದರೆ ರಾಜ್ಯ ನಾಯಕತ್ವ  ಬಹುಮತ ಲಭಿಸಿದ ಪಕ್ಷದ ಪಂಚಾಯತ್ ಅಧ್ಯಕ್ಷರನ್ನು ತೀರ್ಮಾನಿಸಲು ಆಸಕ್ತಿ ವಹಿಸುವುದೇ ಎಂಬ ಬಗ್ಗೆ ಸಂಶಯ ಉಂಟಾಗಿದೆ. ಸಮಸ್ಯೆ ಪರಿಹರಿಸಲು ಯುಡಿಎಫ್‌ನ ಮಿತ್ರ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಲು ಪಕ್ಷ ತೀರ್ಮಾನಿಸಿದಲ್ಲಿ ಕಾರ್ಯಕರ್ತರು ಅದರ ವಿರುದ್ಧ ರಂಗಕ್ಕಿಳಿಯುವರೆಂದು ನಾಯಕತ್ವ ಭಾವಿಸಿರುವುದಾಗಿ ಹೇಳಲಾಗುತ್ತಿದೆ. ಕಾಂಗ್ರೆಸ್  ಅಂತಹ  ಬೇಡಿಕೆಯನ್ನು ಮುಂದಿರಿಸಲು ಸಾಧ್ಯತೆಯಿಲ್ಲ.

24 ಮಂದಿ ಸದಸ್ಯರುಳ್ಳ ಕುಂಬಳೆ ಪಂಚಾಯತ್‌ನಲ್ಲಿ 23 ಮಂದಿಗೂ ಪಂಚಾಯತ್ ಸದಸ್ಯರಾಗಲಿರುವ ಪ್ರಮಾಣವಚನ ಬೋಧಿಸಿಕೊಟ್ಟಿ ರುವುದು ಹಿರಿಯ ಸದಸ್ಯ ಕಾಂಗ್ರೆಸ್‌ನ ಮಂಜುನಾಥ ಆಳ್ವರಾಗಿದ್ದಾರೆ.

ಇವರು ಹಲವು ಬಾರಿ  ಪಂಚಾಯತ್ ಸದಸ್ಯರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಪಕ್ಷದ ಪ್ರಧಾನ ಹೊಣೆಗಾರಿಕೆ ವಹಿಸಿಕೊಂಡಿದ್ದವರು  ಅದನ್ನು ಬಿಟ್ಟು ಆಡಳಿತದ ಹೊಣೆಗಾರಿಕೆ ವಹಿಸಲು ಸಿದ್ಧರಾಗುವರೇ ಎಂಬುವುದು ಸ್ಪಷ್ಟವಲ್ಲ. ಪಂಚಾಯತ್ ಅಧ್ಯಕ್ಷರಾಗುವವರನ್ನು ಪಕ್ಷದ ಪದಾಧಿಕಾರಿ ಸ್ಥಾನದಿಂದ ಹೊರತುಪಡಿಸಲಿರುವ ನಿಲುವನ್ನು ಪಕ್ಷದ ನಾಯಕತ್ವ ಕೈಗೊಳ್ಳುವುದೇ ಎಂಬ ಆತಂಕ ಪ್ರಸ್ತುತ ಹುಟ್ಟಿಕೊಂಡಿದೆ. ಕಳೆದ ಬಾರಿ ಪಂಚಾಯತ್‌ನಲ್ಲಿ ಎಸ್‌ಡಿಪಿಐಯ ಬೆಂಬಲದೊಂದಿಗೆ  ಲೀಗ್ ಅಧಿಕಾರ ನಡೆಸಿತ್ತು.  ಈ ಬಾರಿ ಎಸ್‌ಡಿಪಿಐಯನ್ನು ಕುಂಬಳೆಯಲ್ಲಿ  ಲೀಗ್ ಇಲ್ಲದಂತೆ ಮಾಡಿದೆ. 24 ಮಂದಿ ಸದಸ್ಯರಿರುವ ಪಂಚಾಯತ್ ನಲ್ಲಿ ಮುಸ್ಲಿಂಲೀಗ್‌ಗೆ 13 ಮಂದಿ ಸದಸ್ಯರಿದ್ದಾರೆ. ಈ ಮೂಲಕ ಲೀಗ್‌ಗೆ  ಸ್ಪಷ್ಟ ಬಹುಮತ ಲಭಿಸಿದೆ. ಇದರ ಹೊರತು ಕಾಂಗ್ರೆಸ್‌ನ ಇಬ್ಬರು ಸದಸ್ಯರು ಯುಡಿಎಫ್‌ನಲ್ಲಿದ್ದಾರೆ. ವಿಪಕ್ಷದಲ್ಲಿ ಅತೀ ದೊಡ್ಡ ಪಕ್ಷವಾದ ಬಿಜೆಪಿಗೆ ಐದು ಮಂದಿ ಸದಸ್ಯರಿದ್ದಾರೆ. ಕಳೆದಬಾರಿ 9 ಮಂದಿ ಸದಸ್ಯರಿದ್ದರು. ಸಿಪಿಎಂಗೆ ಮೂವರು ಸದಸ್ಯರಿದ್ದಾರೆ. ಕಳೆದಬಾರಿಯೂ  ಸಿಪಿಎಂಗೆ ಮೂವರು ಸದಸ್ಯರಿದ್ದರು.  27ರಂದು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.

RELATED NEWS

You cannot copy contents of this page