ಬೆದ್ರಂಪಳ್ಳ ಮಸೀದಿಯಿಂದ ಕಳವು: ತನಿಖೆ ಆರಂಭ

ಪೆರ್ಲ: ಬೆದ್ರಂಪಳ್ಳ ಬದರ್ ಜುಮಾ ಮಸೀದಿಯಿಂದ ಹಣ ಕಳವಿಗೀಡಾದ ಪ್ರಕರಣದಲ್ಲಿ   ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 15 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಗುರುವಾರ ರಾತ್ರಿ  9 ಗಂಟೆಯಿಂದ ಶುಕ್ರವಾರ ಮುಂಜಾನೆ 5 ಗಂಟೆ ಮಧ್ಯೆ ಕಳವು ನಡೆದಿದೆ ಯೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆದ್ರಂಪಳ್ಳದ ಶಾಹುಲ್ ಹಮೀದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page