ಮಲಪ್ಪುರಂ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಮಹಿ ಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ತಂಡ ಎರಡು ಪವನ್ ಚಿನ್ನಾಭರಣ ಕಸಿದು ಪರಾರಿಯಾದ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಅಂಬಲಪಡಿ ಬೈಪಾಸ್ನ ಲ್ಲಿರುವ ನಿವೃತ್ತ ಯೋಧ ದಿ| ಪಾಲಿಕ ತ್ತೊಟ್ಟಿಲ್ ವಿಜಯ ಕುಮಾರ್ ಎಂಬವರ ಪತ್ನಿ ಕೆ. ಚಂದ್ರಮತಿ (63) ಎಂಬವರ ಮನೆಗೆ ಮೂವರ ತಂಡ ತಲುಪಿ ಈ ಕೃತ್ಯವೆಸಗಿದೆ. ಮೊನ್ನೆ ರಾತ್ರಿ 9 ಗಂಟೆ ವೇಳೆ ಮನೆಯ ಹೊರಗೆ ಶಬ್ದ ಕೇಳಿಬಂದಿದ್ದು, ಇದರಿಂದ ಚಂದ್ರಮತಿ ಬಾಗಿಲು ತೆರೆದು ನೋಡುತ್ತಿದ್ದಂತೆ ತಂಡ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ವನ್ನು ಎಳೆದು ಪರಾರಿಯಾಗಿ ರುವುದಾಗಿ ದೂರಲಾಗಿದೆ.







