ಶ್ರೀಹರಿಕೋಟಾ: ಅಮೆರಿಕಾದ ಬ್ಲೂ ಬರ್ಡ್ ಬ್ಲಾಕ್-2 ಉಪಗ್ರಹವನ್ನು ಹೊತ್ತ ಇಸ್ರೋದ ಎಲ್‌ವಿಎಂ 3-ಎಂ36 ರಾಕೆಟ್ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ನೆಲೆಯಿಂದ ಇಂದು ಬೆಳಿಗ್ಗೆ ೮.೫೪ಕ್ಕೆ ಯಶಸ್ವಿಯಾಗಿ ಇದರ ಉಡಾವಣೆ ಯಾಗಿದೆ. ಸಂವಹನ ಉಪಗ್ರಹ 6100 ಕಿಲೋ ತೂಕವಿದೆ. ಇದು ಯಶಸ್ವಿಯಾಗಿ ಕಕ್ಷೆ ಸೇರಿದ ಬಳಿಕ ಉಪಗ್ರಹದಿಂದ ನೇರವಾಗಿ ಪ್ರಪಂಚದಿಂದ ಯಾವುದೇ ಸ್ಥಳಕ್ಕೆ ಮೊಬೈಲ್‌ಗೆ ಸಂಪರ್ಕ ಕಲ್ಪಿಸುವ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಬ್ಲೂ ಬರ್ಡ್ ಉಪಗ್ರಹಗಳು ವಿಶೇಷ ಹಾರ್ಡ್ ವೇರ್ ಅಥವಾ ಫೋನ್ ಮಾರ್ಪಾಡುಗಳಿಲ್ಲದೆ ನೇರವಾಗಿ ಸಾಮಾನ್ಯ ಸ್ಮಾರ್ಟ್ ಫೋನ್‌ಗಳಿಗೆ ಬ್ರಾಡ್ ಬ್ಯಾಂಡ್ ಒದಗಿಸುತ್ತದೆ. ಇದರಿಂದ ಬಳಕೆದಾರರಿಗೆ ಭೂಮಿಯ ಭೂಮಿಯ ಯಾವುದೇ ಭಾಗದಿಂದ ವೀಡಿಯೋ ಕರೆಗಳನ್ನು ಮಾಡಲು, ವೆಬ್ ಬ್ರಾಸ್ ಮಾಡಲು ಮತ್ತು ೪ಜಿ ಮತ್ತು ೫ಜಿ ಇಂಟರ್‌ನೆಟ್ ವೇಗವನ್ನು ಬಳಸಲು ಸಾಧ್ಯವಾಗುವುದು.







