ಭೀಕರ ಬಸ್ ದುರಂತ: 12 ಮಂದಿ ಸಜೀವ ದಹನ; ಹಲವರಿಗೆ ಗಂಭೀರ

ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ  ಸ್ಲೀಪರ್ ಕೋಚ್ ಬಸ್‌ಗೆ ಖಾಸಗಿ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಅದರಂದ ಬೆಂಕಿ ಎದ್ದು 12 ಮಂದಿ ಪ್ರಯಾಣಿ ಕರು ಸಜೀವ ದಹನಗೊಂಡು, ಹಲವರು ಗಂಭೀರ ಸುಟ್ಟು ಗಾಯ ಗೊಂಡ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಮುಂಜಾನೆ ನಡೆದಿದೆ.

ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಕರಿದ್ದರು. ಢಿಕ್ಕಿಯ ರಭಸದಿಂದ ಬಸ್ ಮತ್ತು ಕಂಟೈನರ್ ಲಾರಿ ಎರಡೂ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಾರಿ ಚಾಲಕ ಕೂಡಾ ಸಜೀವದಹ ನವಾಗಿದ್ದಾನೆ. ಗಾಯಗೊಂಡ ಬಸ್ಸಿನ ಉಳಿದ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ  ಗಂಭೀರವಾಗಿದ್ದು, ಅದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆಯಂದು ಹೇಳಲಾಗುತ್ತಿದೆ.

ಬೆಂಕಿ ತಗಲಿದ ಸ್ಲೀಪರ್ ಕೋಚ್ ಬಸ್ಸಿನಲ್ಲಿ ೧೫ ಮಹಿಳೆಯರು ಸೇರಿ ಒಟ್ಟು 32 ಮಂದಿ ಪ್ರಯಾಣಿ ಸುತ್ತಿದ್ದರು. ಬಸ್ಸಿನ ಚಾಲಕ ಮತ್ತು ನಿರ್ವಾಹಕ, ಕೆಲವರು ಬಸ್ಸಿನಿಂದ ಹೊರಕ್ಕೆ ಜಿಗಿದು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಅಗ್ನಿಶಾಮ ಕದಳ ಆಗಮಿಸಿ ಬೆಂಕಿ ನಂದಿಸಿದರು. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page