ರೀಲ್ ಚಿತ್ರೀಕರಣಕ್ಕಾಗಿ ರೈಲನ್ನು ನಿಲ್ಲಿಸಿದ ಪ್ಲಸ್ ಟು ವಿದ್ಯಾರ್ಥಿಗಳ ಸೆರೆ

ಕಣ್ಣೂರು: ಅಪಾಯಕರವಾದ ರೀತಿಯಲ್ಲಿ ಟ್ರೈನ್‌ನ್ನು ತಡೆದು ನಿಲ್ಲಿಸಿ ಸಂಚಾರಕ್ಕೆ ತಡೆಯೊಡ್ಡಿದ ಇಬ್ಬರು ಪ್ಲಸ್ ಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ತಲಶ್ಶೇರಿ- ಮಾಹಿ ಮಧ್ಯೆ ಇರುವ ಹಳಿಯಲ್ಲಿ ವಿದ್ಯಾರ್ಥಿಗಳು ತಮಾಷೆ ಗಾಗಿ ರೀಲ್ ಚಿತ್ರೀಕರಿಸುತ್ತಿರುವಾಗ ಅಪರಿಮಿತ ವೇಗದಿಂದ ಸಂಚರಿಸುತ್ತಿದ್ದ ರೈಲಿಗೆ ಕೆಂಪು ದೀಪ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕೋ ಪೈಲೆಟ್ ರೈಲನ್ನು ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ರೈಲು ನಿಂತ ಕೂಡಲೇ ಕ್ಯಾಮರಾ ಸಹಿತ ರೀಲ್ ಚಿತ್ರೀಕರಿಸಲು ಆರಂಭಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದರು. ಈ ಮಧ್ಯೆ ಓರ್ವ ಓಡಿ ಪರಾರಿಯಾಗಿದ್ದಾನೆ.

RELATED NEWS

You cannot copy contents of this page