ಪೈವಳಿಕೆ: ಪೈವಳಿಕೆ ಪಂಚಾಯತ್‌ನಲ್ಲಿ ಯುಡಿಎಫ್ ಅಧಿಕಾರಕ್ಕೇರಿದ್ದು, ಅಧ್ಯಕ್ಷರಾಗಿ 20ನೇ ವಾರ್ಡಿನ ಮುಸ್ಲಿಂಲೀಗ್ ಸದಸ್ಯೆ ಬದ್ರುನ್ನೀಸ ಸಲೀಮ್ ಹಾಗೂ ಉಪಾಧ್ಯಾಕ್ಷರಾಗಿ 9ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ರಾಘವೇಂದ್ರ ಭಟ್ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಒಟ್ಟು 21 ವಾರ್ಡ್ಗಳನ್ನು ಹೊಂದಿದೆ. ಯುಡಿಎಫ್-9, ಬಿಜೆಪಿ-5, ಎಡರಂಗ-6, ಸ್ವತಂತ್ರ-1 ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಾಕ್ಷರ ಚುನಾವಣೆಯಲ್ಲಿ ಬದ್ರುನ್ನೀಸ ಸಲೀಮ್‌ರಿಗೆ ಹಾಗೂ ರಾಘವೇಂದ್ರ ಭಟ್‌ರಿಗೆ ತಲಾ 9 ಮತಗಳು, ಬಿಜೆಪಿಯಿಂದ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಸುಮನ.ಜಿ ಭಟ್ ಹಾಗೂ ಉಪಾಧ್ಯಾಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಗಣೇಶ್ ಪ್ರಸಾದ್‌ರಿಗೆ ತಲಾ 5 ಹಾಗೂ ಎಡರಂಗದಿAದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ದಿನೇಶ್ವರಿ ನಾಗೇಶ್ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ ಹಾರೀಸ್‌ರಿಗೆ ತಲಾ 6 ಮತಗಳು ಲಭಿಸಿದ್ದು, ಸ್ವತಂತ್ರ ಸದಸ್ಯ ತಟಸ್ಥರಾಗಿದ್ದರು. ಕಳೆದ ಬಾರಿ 8 ಬಿಜೆಪಿ, 8 ಎಡರಂಗ ಪಡೆದುಕೊಂ ಡಿದ್ದು, ಇದರಿಂದ ಟಾಸ್ ಮೂಲಕ ಅಧ್ಯಕ್ಷರು ಎಡರಂಗ, ಉಪಾಧ್ಯಾಕ್ಷ ಸ್ಥಾನ ಬಿಜೆಪಿಗೆ ಒಲಿದಿತ್ತು.
ಮಿಂಜ : ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ 16ನೇ ವಾರ್ಡ್ನ ಲೀಗ್ ಸದಸ್ಯ ತಾಜುದ್ದೀನ್ ಕಡಂಬಾರು, ಉಪಾಧ್ಯಾಕ್ಷರಾಗಿ 10ನೇ ವಾರ್ಡ್ನ ಕಾಂಗ್ರೆಸ್ ಸದಸೆ್ಯ ಉಷಾ ಪೂಂಜಾ ಆಯ್ಕೆಗೊಂಡಿದ್ದಾರೆ. ಪಂಚಾಯತ್ ಒಟ್ಟು 17 ವಾರ್ಡ್ಗಳನ್ನು ಹೊಂದಿದೆ. 9 ಯುಡಿಎಫ್, 7 ಬಿಜೆಪಿ, 1 ಎಡರಂಗ. ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಜುದ್ದೀನ್‌ರಿಗೆ ಹಾಗೂ ಉಷಾ ಪೂಂಜಾರಿಗೆ ತಲಾ 9 ಮತಗಳು, ಬಿಜೆಪಿಯಿಂದ ಸ್ಪರ್ಧಿಸಿದ ಕೃಷ್ಣ.ಕೆ ಬೆಜ್ಜ ಹಾಗೂ ಆಶಾಲತರಿಗೆ ತಲಾ 7 ಮತಗಳು ಲಭಿಸಿದೆ. ಎಲ್.ಡಿ.ಎಫ್ ಸದಸ್ಯ ತಟಸ್ಥರಾಗಿದ್ದರು.







