ಉಪ್ಪಳ: ಕಾರಿನಲ್ಲಿ ತಲುಪಿದ ತಂಡ ಬೈಕ್ ತಡೆದು ನಿಲ್ಲಿಸಿ ಸವಾರನಿಗೆ ಇರಿದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಉಪ್ಪಳ ಕೋಡಿಬೈಲು ನಿವಾಸಿ ಜಕರಿಯ (61) ಎಂಬವರು ಇರಿತದಿಂದ ಗಾಯಗೊಂಡಿದ್ದಾರೆ. ಈ ಸಂಬಂಧ ಬಟ್ಯಪದವು ನಿವಾಸಿ ರಜಾಕ್ ಸಹಿತ ಇಬ್ಬರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಿಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಘಟನೆ ನಡೆದಿದೆ. ಜಕರಿಯ ಬೈಕ್‌ನಲ್ಲಿ ವರ್ಕಾಡಿ ಭಾಗದಿಂದ ಉಪ್ಪಳ ಕಡೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ತಲುಪಿದ ರಜಾಕ್ ಸಹಿತ ಇಬ್ಬರು ತಡೆದು ನಿಲ್ಲಿಸಿ ಹಣ ಕೇಳಿದ್ದರೆನ್ನಲಾಗಿದೆ. ಆದರೆ ಜಕರಿಯ ಹಣ ನೀಡದಿರುವುದರಿಂದ ಇರಿದು ಗಾಯಗೊಳಿಸಿರುವುದಾಗಿ ದೂರಲಾ ಗಿದೆ. ಗಾಯಗೊಂಡ ಜಕರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.







