ಉಪ್ಪಳ: ಪಾವೂರು ಮುಡಿಮಾರ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕೋಳಿ ಅಂಕ ಸ್ಥಳದಿಂದ 89,510 ರೂ. ವಶಪಡಿಸಲಾಗಿದೆ. ಕೆದುಂಬಾಡಿ ನೆತ್ತಿಲಪದವು ನಿವಾಸಿ ರೋಹಿತ್ ರಾಜ್ (30), ಬಂಟ್ವಾಳ ಮುಡಿಪು ವಿನ ನಿತೀಶ್ (29), ಸವಣೂರು ಪಾತೂರಿನ ದೇವದಾಸ್ (43) ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ನಿನ್ನೆ ಸಂಜೆ 4.30ರ ವೇಳೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್,ಉಮೇಶ್ ಕೆ.ಆರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೋಳಿ ಅಂಕ ಸ್ಥಳದಲ್ಲಿದ್ದ ಇನ್ನು ಕೆಲವರು ಓಡಿ ಪರಾರಿ ಯಾಗಿದ್ದಾರೆಂದು ಪೊಲೀಸರು ತಿಳಿಸಿ ದ್ದಾರೆ. ಎಸ್‌ಐಗಳೊಂದಿಗೆ ಪೊಲೀಸ ರಾದ ಚಂದ್ರಕಾಂತ್, ಅಬ್ದುಲ್ ಸಲಾಂ, ಸನೂಪ್ ಎಂಬಿವ ರು ಕಾರ್ಯಾಚರಣೆ ತಂಡದಲ್ಲಿದ್ದರು. ವಶಪಡಿಸಿದ ಹಣ ಹಾಗೂ ಕೋಳಿಗ ಳನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸು ವುದಾಗಿ ಪೊಲೀಸರು ತಿಳಿಸಿದ್ದಾರೆ.







