ನೀರ್ಚಾಲು: ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಬೇಳ ಕುಮಾರಮಂಗಲ ಲೈಫ್ ಕಾಲನಿಯ ನಿವಾಸಿ ಚಿಮ್ಮಿಣಿಯ ಡ್ಕದ ನಾರಾಯಣ ಮುಖಾರಿ (69) ಮೃತಪಟ್ಟ ವ್ಯಕ್ತಿ.ನಿನ್ನೆ ಮುಂಜಾನೆ ೪ ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಜಲಜಾ, ಮಕ್ಕಳಾದ ಪ್ರವೀಣ್ ಕುಮಾರ್, ನವೀನ ಕುಮಾರಿ, ದುರ್ಗಾಪರ ಮೇಶ್ವರಿ, ಅನ್ನಪೂರ್ಣೇಶ್ವರಿ (ಬದಿ ಯಡ್ಕ ಪಂ. ಹಸಿರು ಕ್ರಿಯಾ ಸೇನೆ ಸದಸ್ಯೆ), ರಾಜೇಶ್ವರಿ, ಸೌಪರ್ಣಿಕಾ, ಅಳಿಯ-ಸೊಸೆಯಂದಿರಾದ ರಂಜಿತ, ಅನುಗ್ರಹ (ಕಣ್ಣಪುರಂ), ಸಂತೋಷ್,ಪ್ರಿಜೇಶ್, ಸಹೋ ದರಿಯರಾದ ಭಾಗೀರಥಿ,ಪಾರ್ವತಿ, ವಾರಿಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ನಿಜೀಶ್, ಸಹೋದರಿ ಯರಾದ ಪರಮೇಶ್ವರಿ, ಸುಬ್ಬಿ ಎಂಬಿ ವರು ಈ ಹಿಂದೆ ನಿಧನರಾಗಿದ್ದಾರೆ.







