ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್ ಈಸ್ಟ್ ಘಟಕದ ಆಶ್ರಯದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ, ಆಟೋ ಚಾಲಕರೊಂದಿಗೆ ಹೊಸ ವರ್ಷವನ್ನು ಆಚರಿಸಲಾಯಿತು. ಕಾಸರಗೋಡು ನಗರಠಾಣೆಯ ಮಹಿಳಾ ಎಸ್‌ಐ ಅಜಿತ ಕೇಕ್ ಕತ್ತರಿಸಿ ಆಚರಣೆಗೆ ಚಾಲನೆ ನೀಡಿದರು. ಘಟಕ ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್, ಜಿಲ್ಲಾ ಸಮಿತಿ ಸದಸ್ಯ ದಿನೇಶ್, ವಲಯ ಅಧ್ಯಕ್ಷ ವಾಮನ್ ಕುಮಾರ್, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಮಣಿ, ಸುರೇಶ್ ಬಿ.ಜೆ, ಪಿಆರ್‌ಒ ಮನೀಶ್ ಭಾಗವಹಿ ಸಿದರು. ಎಸ್‌ಐ ಅಜಿತ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು.







