ಬದಿಯಡ್ಕ: ಪಂಚಾಯತ್‌ನಿಂದ ಮಂಜೂರುಗೊಂಡ ಮನೆ ನಿರ್ಮಾಣ ಕಾಮಗಾರಿಗೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಿವಿಧ ಕಾರಣಗಳನ್ನು ತಿಳಿಸಿ ತಡೆಯೊಡ್ಡಿ ಫಲಾನುಭವಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದು, ಅಧಿಕಾರಿಗಳ ಇಂತಹ ಕ್ರಮಕ್ಕೆ ಕಡಿವಾಣ ಹಾಕಬೇಕೆಂದು ನೀರ್ಚಾಲು ಸಿಂಧೂರ ಯುವಕ ವೃಂದ ಒತ್ತಾಯಿಸಿದೆ. ಈ ಬೇಡಿಕೆಯನ್ನು ಮುಂದಿರಿಸಿ ಸಿಂಧೂರ ಯುವಕ ವೃಂದದ ಪದಾಧಿಕಾರಿಗಳು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ.ಶಂಕರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನೆ ನಿರ್ಮಾಣ ಕಾಮಗಾರಿ ವೇಳೆ ಅಧಿಕಾರಿಗಳು ಅಲ್ಲಿಗೆ ತಲುಪಿ ವಿವಿಧ ಕಾರಣಗಳನ್ನು ತಿಳಿಸಿ ದಂಡ ವಿಧಿಸುತ್ತಿದ್ದು, ಇದರಿಂದ ಬಡ ಫಲಾನುಭವಿಗಳು ಸಂಕಷ್ಟಕ್ಕೊಳ ಗಾಗುತ್ತಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯತ್ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಯುವಕ ವೃಂದದ ಅಧ್ಯಕ್ಷ ರವೀಂದ್ರ ವಿಷ್ಣುಮೂರ್ತಿನಗರ,ಕಾರ್ಯದರ್ಶಿ ಲೋಹಿತ್ ಕುಮಾರ್,ಸತೀಶ್ ಆಚಾರ್ಯ, ಪ್ರಶಾಂತ್ ಕುಮಾರ್ ಶೆಟ್ಟಿ ಮೊದಲಾದವರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.







