ಮಂಜೇಶ್ವರ: ಮಂಜೇ ಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸೈಫುಲ್ಲ ತಂಙಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ ಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು ೧೬ ವಾರ್ಡ್ ಇದ್ದು, ೧೧ರಲ್ಲಿ ಯುಡಿಎಫ್, ೩ರಲ್ಲಿ ಬಿಜೆಪಿ, ೨ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.







