ಕಲ್ಲಿಕೋಟೆ: ಕೈದಪ್ಪೊಳದಲ್ಲಿ ಬಾಡಿಗೆಗೆ ವಾಸಿಸುವ ಫ್ಲ್ಯಾಟ್‌ನಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಕೂರು ನಿವಾಸಿ ಹಸ್ನ (34) ಮೃತಪಟ್ಟ ಯುವತಿ. ವಿವಾಹ ವಿಚ್ಛೇಧನಗೈದ ಹಸ್ನ ಕಳೆದ ೮ ತಿಂಗಳಿಂದ ಪುದುಪ್ಪಾಡಿ ನಿವಾಸಿಯಾದ ಆದಿಲ್ ಎಂಬ ಯುವಕನ ಜೊತೆ ವಾಸಿಸುತ್ತಿದ್ದರು. ಕಾನೂನು ಪರವಾಗಿ ಇವರಿಬ್ಬರು ವಿವಾಹ ಮಾಡಿಕೊಂಡಿಲ್ಲ. ಮಂಗಳವಾರ ಬೆಳಿಗ್ಗೆ ಕೊಠಡಿ ತೆರೆಯದ ಹಿನ್ನೆಲೆಯಲ್ಲಿ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಹಸ್ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಮಹಜರು ಕ್ರಮಗಳ ಬಳಿಕ ಮೃತದೇಹವನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿನಲ್ಲಿ ಸ್ಪಷ್ಟತೆ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ೧೩ ವರ್ಷದಿಂದ ಹಿರಿಯ ಪುತ್ರ ಹಸ್ನಳೊಂದಿಗೆ ವಾಸಿಸುತ್ತಿದ್ದು, ಇತರ ಇಬ್ಬರು ಮಕ್ಕಳನ್ನು ಈಕೆಯ ಮೊದಲ ಪತಿ ತೋರಿಸದ ಕಾರಣ ಮಾನಸಿಕ ಅಸ್ವಸ್ಥತೆ ಇದ್ದಿರುವುದಾಗಿ ಹೇಳಲಾಗುತ್ತಿದೆ.







