ಮದ್ಯಪಾನಿ ಪ್ರಯಾಣಿಕರಿಂದ ರೈಲಿನಲ್ಲಿ ಸಮಸ್ಯೆ: ಬಿವರೇಜಸ್‌ನ ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸುವಂತೆ ಬೇಡಿಕೆ ಮುಂದಿರಿಸಿದ ರೈಲ್ವೇ

ತಿರುವನಂತಪುರ: ಪ್ರಯಾಣಿಕರು ಮದ್ಯ ಸೇವಿಸಿ ರೈಲಿನಲ್ಲಿ ಸಮಸ್ಯೆ ಸೃಷ್ಟಿಸುವುದು ನಿತ್ಯ ಘಟನೆಯಾಗುವು ದರೊಂದಿಗೆ ವಿಚಿತ್ರ ಬೇಡಿಕೆಯೊಂದಿಗೆ ರೈಲ್ವೇ ಇಲಾಖೆ ರಂಗಕ್ಕಿಳಿದಿದೆ. ರೈಲು ನಿಲ್ದಾಣ ಸಮೀಪದಲ್ಲಿರುವ ಬಿವರೇಜಸ್ ಕಾರ್ಪೋರೇಶನ್‌ನ ಔಟ್‌ಲೆಟ್ ಗಳನ್ನು ಮುಚ್ಚು ಗಡೆಗೊಳಿ ಸಬೇಕೆಂಬುದಾಗಿದೆ ರೈಲ್ವೇಯ ಬೇಡಿಕೆ. ರೈಲ್ವೇಯ ತಿರುವನಂತಪುರ ಡಿವಿಶನ್‌ನಿಂದ ಈ ಕುರಿತಾಗಿ ಬೆವ್‌ಕೋಗೆ ಮನವಿ ಸಲ್ಲಿಸಲಾಗಿದೆ.  ರೈಲ್ವೇ ನಿಲ್ದಾಣಗಳ ೫೦೦ ಮೀಟರ್ ನೊಳಗಿನ ವ್ಯಾಪ್ತಿಯಿಂದ ಬೆವ್‌ಕೋದ ಔಟ್‌ಲೆಟ್‌ಗಳನ್ನು ತೆರವುಗೊಳಿ ಬೇಕೆಂದು ರೈಲ್ವೇ ಒತ್ತಾಯಿಸಿದೆ. ನವಂಬರ್ ೨ರಂದು ವರ್ಕಲದಲ್ಲಿ ಕೇರಳ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಿಂದ ಯುವತಿಯನ್ನು  ದೂಡಿಹಾಕಿದ ಘಟನೆಯನ್ನು ಉದಾಹರಣೆಯಾಗಿ ತಿಳಿಸಿ ಇಂತಹವೊಂದು ಬೇಡಿಕೆ ಯನ್ನು ರೈಲ್ವೇ ಮುಂದಿರಿಸಿದೆ. ಯುವತಿ ಈಗಲೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆಯಲ್ಲಿ ಆರೋಪಿಯಾದ  ಪ್ರಯಾಣಿಕ ಕೋಟಯಂನಿಂದ ಮದ್ಯ ಸೇವಿಸಿ ರೈಲಿಗೆ ಹತ್ತಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.

You cannot copy contents of this page