ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಕೆ. ಎನ್ ವೆಂಕಟ್ರಮಣ ಹೊಳ್ಳ- ರೂಪ ಕಲಾ ದಂಪತಿಯನ್ನು ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕ್ರಮದಲ್ಲಿ ಕೋಲಾರ- ಕಾಸರ ಗೋಡು ಗಡಿನಾಡ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಇದರ ರೂವಾರಿ ಶಿವಕುಮಾರ್ ಪ್ರದಾನ ಮಾಡಿದರು.
ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪ್ರಾಧ್ಯಾಪಕ ಡಾ. ಶರಣಪ್ಪ ಗಬ್ಬೂರು, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಸಾಹಿತಿ ರುಬೀನಾ ಎಂ. ಎ, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರವಿ ನಾಯ್ಕಾಪ್, ಪ್ರೊ. ಶ್ರೀನಾಥ್ ಕಾಸರಗೋಡು, ರಾಜೇಶ್ ಕೋಟೆಕಣಿ ಭಾಗವಹಿಸಿದ್ದರು.







