ಕುಂಬಳೆ: ಮೊಗ್ರಾಲ್ ಶಾಲೆಯಲ್ಲಿ ಮುಕ್ತಾಯಗೊಂಡ 64 ನೇ ಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವ ದಲ್ಲಿ ಯು.ಪಿ ಅರೇಬಿಕ್ ವಿಭಾಗ ದಲ್ಲಿ ಜಿ.ಎಸ್.ಬಿ.ಎಸ್ ಕುಂಬಳೆ 30 ಅಂಕಗಳನ್ನು ಗಳಿಸಿ ಚಾಂಪ್ಯನ್ ಪ್ರಶಸ್ತಿ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಪ್ರಶಸ್ತಿ ಫಲಕವನ್ನು ವಿತರಿಸಿದರು. ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದು ಈ ಸಾಧನೆ ಮಾಡಿದೆ. ಇಂಗ್ಲಿಷ್ ಸ್ಕಿಟ್ ಕೇವಲ ಶಾಲಾ ಅಧ್ಯಾಪಕರ ತರಬೇತಿಯಿಂದ ಎ ಗ್ರೇಡ್ ನೊಂ ದಿಗೆ ದ್ವಿತೀಯ ಸ್ಥಾನ ಪಡೆದಿರುವುದು ಶಾಲೆಯ ಸಾಧನೆಗೆ ಇನ್ನೊಂದು ಕಿರೀಟ ಇಟ್ಟಂತಾಗಿದೆ ಎಂದು ಸಂಬAಧಪಟ್ಟವರು ತಿಳಿಸಿದ್ದಾರೆ.







