ಜಿಲ್ಲಾ ಕಲೋತ್ಸವ: ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್‌ಬೋಸ್ಕೊ ಶಾಲೆ ಚಾಂಪ್ಯನ್





ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 64ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್ ಬೋಸ್ಕೊ ಎಯುಪಿ ಶಾಲೆಯು 48 ಅಂಕಗಳೊAದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಯುಪಿ ಸಂಸ್ಕೃತ ವಿಭಾಗದಲ್ಲಿ 35 ಅಂಕಗಳೊAದಿಗೆ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಕಲೋತ್ಸವದಲ್ಲಿ ಯುಪಿ ವಿಭಾಗದಲ್ಲಿ ನಡೆದ ಒಟ್ಟು ಹತ್ತು ಸ್ಪರ್ಧೆಗಳಲ್ಲಿ ಕಯ್ಯಾರು ಡೋನ್ ಬೋಸ್ಕೊ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರೂಪ್ ವಿಭಾಗಗಳಲ್ಲಿ ಯುಪಿ ಸಮೂಹ ನೃತ್ಯ ಎ ಗ್ರೇಡ್, ಯುಪಿ ತಿರುವಾದಿರಕಳಿ ಎ ಗ್ರೇಡ್ ಹಾಗೂ ಯುಪಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದೆ. ವೈಯಕ್ತಿಕ ವಿಭಾಗಗಳಾದ ಭರತನಾಟ್ಯ ಹಾಗೂ ಜಾನಪದ ನೃತ್ಯದಲ್ಲಿ ಕೃಷ್ಣಪ್ರಿಯ ಎಸ್. ಕುಮಾರ್ ಎ ಗ್ರೇಡ್, ಏಕಪಾತ್ರಾಭಿನಯದಲ್ಲಿ ಯಶ್ವಿ ಶೆಟ್ಟಿ ಎ ಗ್ರೇಡ್, ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಬ್ಲೆಸ್ಸಿಕಾ ಪ್ರೇಯಲ್ ಆರ್. ಎ ಗ್ರೇಡ್, ಹಿಂದಿ ಭಾಷಣ ಸ್ಪರ್ಧೆಯಲ್ಲಿ ದನೀಶ್ ಶೆಟ್ಟಿ ಎ ಗ್ರೇಡ್, ಯುಪಿ ಸಂಸ್ಕೃತ ಭಾಷಣದಲ್ಲಿ ಮಾತ್ವಿಕ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ, ಉರ್ದು ಕಂಠಪಾಠದಲ್ಲಿ ಆಯಿಷ ಶಿಬ್ಲಾ ಎ ಗ್ರೇಡ್, ಸನುಷಾ ಪಿ. ಇವರಿಗೆ ಸಂಸ್ಕೃತ ಸಿದ್ಧರೂಪಾಚರಣಂ ಸ್ಪರ್ದೆಯಲ್ಲಿ ಎ ಗ್ರೇಡ್‌ನೊಂದಿಗೆ ಪ್ರಥಮ ಹಾಗೂ ಸಂಸ್ಕೃತ ಗದ್ಯಪಾರಾಯಣಂನಲ್ಲಿ ಎ ಗ್ರೇಡ್‌ನೊಂದಿಗೆ ದ್ವಿತೀಯ, ಶಿವ್ ತೇಜಸ್ ಬರ್ಲಾಯ ಇವರಿಗೆ ಸಂಸ್ಕೃತ ಪ್ರಶ್ನೋತ್ತರಿಯಲ್ಲಿ ಎ ಗ್ರೇಡ್‌ನೊಂದಿಗೆ ಪ್ರಥಮ ಹಾಗೂ ಸಂಸ್ಕೃತ ಸಿದ್ಧರೂಪಾಚರಣಂನಲ್ಲಿ ಎ ಗ್ರೇಡ್‌ನೊಂದಿಗೆ ದ್ವಿತೀಯ ಹಾಗೂ ಸಂಸ್ಕೃತ ಪ್ರಬಂಧ ರಚನೆಯಲ್ಲಿ ಮನ್ವಿತ ಪಿ. ಎ ಗ್ರೇಡ್‌ನೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

You cannot copy contents of this page