ಮಧ್ಯರಾತ್ರಿ ಹೊಳೆಯಿಂದ ಹೊಯ್ಗೆ ಕಳವುಗೈದು ಸಾಗಾಟ : 2 ಟಿಪ್ಪರ್ ಲಾರಿಗಳ ವಶ

ಕುಂಬಳೆ: ಹೊಳೆಗಳಿಂದ ಹೊಯ್ಗೆ ಕಳವುಗೈದು ಸಾಗಿಸುವ ದಂಧೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಹೊಯ್ಗೆ ಸಾಗಾಟ ದಂಧೆ ತೀವ್ರಗೊಂಡಿದೆ. ನಿನ್ನೆ ಮಧ್ಯ ರಾತ್ರಿಯೂ ಹೊಯ್ಗೆ ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಹೊಯ್ಗೆ ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶ ಡಿಸಲಾಗಿದೆ. ಒಂದು ಲಾರಿಯನ್ನು ಕುಂಬಳೆ ಅಂಡರ್‌ಪಾಸ್‌ನಿಂದ ಹಾಗೂ ಇನ್ನೊಂದು ಲಾರಿಯನ್ನು ಮೊಗ್ರಾಲ್ ಅಂಡರ್‌ಪಾಸ್‌ನಿಂದ ವಶಪಡಿಸಲಾಗಿದೆ. ಎಸ್‌ಐಯನ್ನು ಕಂಡೊಡನೆ ಲಾರಿಗಳನ್ನು ಉಪೇಕ್ಷಿಸಿ ಚಾಲಕರು ಪರಾರಿಯಾಗಿದ್ದಾರೆ. ಬಳಿಕ ಹೊಯ್ಗೆ ಸಹಿತ ಲಾರಿಗಳನ್ನು ಕುಂಬಳೆ ಠಾಣೆಗೆ ತಲುಪಿಸಲಾಗಿದೆ. ಲಾರಿಗಳ ಆರ್.ಸಿ. ಮಾಲಕರನ್ನು ಪತ್ತೆಹಚ್ಚಿ ಅವರ ಮೂಲಕ ಚಾಲ ಕರನ್ನು ಗುರುತಿಸಿ ಬಂಧಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page