ನಿಲ್ಲಿಸಿದ್ದ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದ ಸಾರಿಗೆ ಬಸ್

ಕುಂಬಳೆ: ನಿಲ್ಲಿಸಿದ್ದ ಖಾಸಗಿ ಬಸ್‌ನ ಮುಂಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದಿದ್ದು, ಇದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಯಿತು. ಇಂದು ಬೆಳಿಗ್ಗೆ 9.45ರ ವೇಳೆ ಕುಂಬಳೆ ಪೇಟೆಯಲ್ಲಿ ಈ ಘಟನೆ ನಡೆದಿದೆ. ಮಂಗಳೂರು- ಕಣ್ಣೂರು ಮಧ್ಯೆ ಸಂಚರಿಸುವ ಮೆಹಬೂಬ್ ಬಸ್ ಕುಂಬಳೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಕರ್ನಾಟಕರಾಜ್ಯ ಸಾರಿಗೆ ಬಸ್ ಮುಂದೆ ಸಂಚರಿಸುತ್ತಿದ್ದಂತೆ ಖಾಸಗಿ ಬಸ್‌ನ ಬದಿಗೆ ಒರೆಸಿದೆಯೆಂದು ದೂರಲಾಗಿದೆ. ಇದರಿಂದ ಅಲ್ಪಹೊತ್ತು ಸಾರಿಗೆ ಅಡಚಣೆ ಉಂಟಾಗಿದ್ದು, ಬಳಿಕ ಈ ಎರಡು ಬಸ್‌ಗಳನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು. ಇದರಿಂದ ಈ ಎರಡು ಬಸ್‌ಗಳ ಪ್ರಯಾಣಿಕರು ಬೇರೆ ಬಸ್‌ಗಳಲ್ಲಿ ಸಂಚರಿಸಬೇಕಾಗಿ ಬಂತು.

You cannot copy contents of this page