ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಎಂ.ಕೆ. ಬ್ರದರ್ಸ್ ಸಂಸ್ಥೆ ವತಿಯಿಂದ ಮಂಗಲ್ಪಾಡಿ ಪಂಚಾಯತ್‌ನ ನೂತನ ಸದಸ್ಯ ರನ್ನು ಹಾಗೂ ಶಾಸಕರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು. ಎಂ.ಕೆ ಬ್ರದರ್ಸ್ನ ಅಧ್ಯಕ್ಷ ಹಮೀದ್ ನೀಲ್‌ಕಮಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ ಅಶ್ರಫ್, ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಉಪಾಧ್ಯಕ್ಷೆ ಸಮೀನ ಟೀಚರ್, ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್, ಬ್ಲೋಕ್ ಪಂಚಾಯತ್ ಸದಸ್ಯೆ ಜಮೀಲ ಸಿದ್ದಿಕ್, 4ನೇ ವಾರ್ಡ್ ಸದಸ್ಯೆ ನಾಜಿಯ ಅಜೀಜ್, ಟಿ.ಎ ಶರೀಫ್‌ರನ್ನು ಅಭಿನಂದಿಸ ಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಪರ್ವೀಜ್ ಸ್ವಾಗತಿಸಿ, ಕೋಶಾಧಿಕಾರಿ ಶೇಕ್ ಮುಬೀನ್ ಎಂ.ಕೆ. ವಂದಿಸಿದರು.







