ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಷನ್ ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ನಡೆಯಿತು. ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆ ವಹಿಸಿದರು. ಛಾಯಾಚಿತ್ರ ಸ್ಪರ್ಧೆ ಯಲ್ಲಿ ವಿಜೇತರಿಗೆ ಹಾಗೂ ಭಾಗ ವಹಿಸಿದವರಿಗೆ ಬಹುಮಾನ, ಪ್ರಮಾಣಪತ್ರ ನೀಡಲಾಯಿತು. ಪ್ರದೀಪ್ ಬೇಕಲ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಹಿರಿಯ ಛಾಯಾಗ್ರಾಹಕ ಗೋವಿಂದನ್ ಚಂಗರಕ್ಕಾಡ್‌ರನ್ನು ಅಭಿನಂದಿಸ ಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮನೀಶ್‌ರಿಗೆ ದಿನೇಶ್  ಸ್ಮರಣಿಕೆ ನೀಡಿದರು. ವಲಯ ಅಧ್ಯಕ್ಷ ವಾಮನ್ ಕುಮಾರ್ ಮಾತನಾಡಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸನಲ್, ದ್ವಿತೀಯ ಸ್ಥಾನ ಗಳಿಸಿದ ಕೃಷ್ಣರಿಗೆ ಬಹುಮಾನ ವಿತರಿಸಲಾಯಿತು.  ಜಿಲ್ಲಾ ಸಮಿತಿ ಸದಸ್ಯ ಮನು, ಹಿರಿಯ ಛಾಯಾಗ್ರಾಹಕ ಮೈಂದಪ್ಪ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ, ವಲಯ ಜೊತೆ ಕಾರ್ಯದರ್ಶಿ ಗಣೇಶ್ ರೈ, ಉಪಾಧ್ಯಕ್ಷ ಅಭಿಷೇಕ್ ಸಿ, ಕೋಶಾಧಿಕಾರಿ ಅಮಿತ್, ಸದಸ್ಯರಾದ ನಾರಾಯಣನ್ ಟಿ, ವಾಸು ಎ, ಚಂದ್ರಶೇಖರ ಎಂ, ವಿಶಾಖ್, ಉದಯ, ಲಾವಣ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ಪಿಆರ್‌ಒ ವಿನೋದ್ ಕಲ್ಲಂಗೈ ವಂದಿಸಿದರು.

You cannot copy contents of this page