ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾಸಂಘ ಅಡ್ವಳ ವಲಯ ವಾರ್ಷಿಕ ಮಹಾಸಭೆ

ಮುಳ್ಳೇರಿಯ: ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ ಅಡ್ವಳ ವಲಯ ಇದರ  ವಾರ್ಷಿಕ ಮಹಾಸಭೆ ನಿನ್ನೆ ಅಡ್ವಳಬೀಡಿನಲ್ಲಿ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್ ಉದ್ಘಾಟಿಸಿದರು. ವಲಯ ಸಮಿತಿ ಅಧ್ಯಕ್ಷ ಮರಿಯಯ್ಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ವಲಯ ಕಾರ್ಯದರ್ಶಿ ಎ.ಬಿ. ಮಧುಸೂದನ ಬಲ್ಲಾಳ್ ವರದಿ ಮಂಡಿಸಿದರು. ವಲಯ ಸಮಿತಿ ಗೌರವಾಧ್ಯಕ್ಷರಾದ ಬಾಲಕೃಷ್ಣ ಬಲ್ಲಾಳ್ ಅಡ್ವಳಬೀಡು, ಮರಿಯಯ್ಯ ಬಲ್ಲಾಳ್ ಅಡ್ವಳಬೀಡು, ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ್ ಬಲ್ಲಾಳ್, ಮಹಿಳಾ ಸಂಘ ಕಾರ್ಯದರ್ಶಿ ಶ್ಯಾಮಲ ಬಲ್ಲಾಳ್ ಶುಭ ಕೋರಿದರು. ಹರ್ಷ ಮಾಸ್ತರ್ ನಿರೂಪಿಸಿದರು.  ನಟ, ನಿರ್ದೇಶಕನಾದ ಮಧುಸೂದನ ಬಲ್ಲಾಳ್ ಎ.ಬಿ. ಇವರನ್ನು ಅಭಿನಂದಿಸಲಾಯಿತು. ಶ್ರೀ ವಿಷ್ಣುಮೂರ್ತಿ ಭಜನಾ ಸಂಘದವರಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ಜರಗಿತು. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಜರಗಿದ್ದು, ಕೇಂದ್ರ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಬಲ್ಲಾಳ್ ಉದ್ಘಾಟಿಸಿದರು. ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು. ನೂತನ ಸಮಿತಿ ರೂಪೀಕರಿಸಲಾ ಯಿತು.  ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಬಲ್ಲಾಳ್, ಉಪಾಧ್ಯಕ್ಷರಾಗಿ ದಾಮೋದರ ಬಲ್ಲಾಳ್, ಕಾರ್ಯದರ್ಶಿಯಾಗಿ ಲೋಕೇಶ್ ಬಲ್ಲಾಳ್, ಜೊತೆ ಕಾರ್ಯದರ್ಶಿಯಾಗಿ ಗಂಗಾಧರ ಬಲ್ಲಾಳ್ ಗೋಳಿಕಟ್ಟೆ, ಕೋಶಾಧಿಕಾರಿಯಾಗಿ ನವೀನ್ ಕುಮಾರ್, ಸದಸ್ಯರಾಗಿ ಜಗದೀಶ ಬಲ್ಲಾಳ್, ಸೂರಜ್ ಬಲ್ಲಾಳ್, ಅವಿನಾಶ್ ಬಲ್ಲಾಳ್, ಮಧುಸೂದನ ಬಲ್ಲಾಳ್, ವೈಶಾಖ್ ಬಲ್ಲಾಳ್, ಸತ್ಯನಾರಾಯಣ ಬಲ್ಲಾಳ್ ಆಯ್ಕೆಗೊಂಡರು.

You cannot copy contents of this page