ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ನಿಧನ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ರಮೇಶ (ರಾಮಪ್ಪ) (38) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಕಳೆದ ಐದು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಕಾರ್ನವರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತ: ಮಂಗಲ್ಪಾಡಿ ಪ್ರತಾಪನಗರ ನಿವಾಸಿಯಾಗಿದ್ದು, ಮುಳಿಂಜ ಭಂಡಾರ ತರವಾಡು ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಕೃಪಾ, ಪುತ್ರಿ ಮನಸ್ವಿ, ಸಹೋದರ ಗಣೇಶ, ಸಹೋದರಿ ರಮ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಪ್ರತಾಪನಗರದ ಮನೆ ಪರಿಸರದಲ್ಲಿ ನಡೆಯಿತು. ನಿಧನಕ್ಕೆ ಉಪ್ಪಳ ಶ್ರೀ ಭಗವತೀ ಕ್ಷೇತ್ರ ಸೇವಾ ಸಮಿತಿ, ಶ್ರೀ ಭಗವತೀ ಮಹಿಳಾ ಸಂಘ, ಶ್ರೀ ಭಗವತೀ ಯುವಜನ ಸಂಘ, ಐಲ ಮಲಯಾಳಿ ಬಿಲ್ಲವ ಸಂಘ ಸಂತಾಪ ಸೂಚಿಸಿದೆ.

You cannot copy contents of this page