ಕುಸಿದುಬಿದ್ದು ಮೃತ್ಯು

ಕಾಸರಗೋಡು: ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿ ಎ. ಸಂಜೀವ(64) ನಿಧನಹೊಂದಿದರು. ಇಂದು ಬೆಳಿಗ್ಗೆ ಬಾತ್‌ರೂಂನಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದ್ದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಇವರು ಸಿಪಿಸಿಆರ್‌ಐಯಲ್ಲಿ ನೌಕರನಾಗಿ ಸೇವೆ ಸಲ್ಲಿಸಿದ್ದರು.

ಕುಂಟ್ಯಾನ-ಕುಂಭ ದಂಪತಿ ಪುತ್ರನಾದ  ಮೃತರು ಪತ್ನಿ ಉಷ, ಪುತ್ರಸುಜನ್‌ಪಾಲ್, ಸೊಸೆ ಶಾಲಿನಿ, ಸಹೋದರ ರಾಮಚಂದ್ರ, ಸಹೋದರಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ನಾರಾಯಣ, ಶಂಕರ, ರಾಮ ಎಂಬವರುಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page