ಅನಂತಪುರ ಕೈಗಾರಿಕಾ  ಸಂಸ್ಥೆಯ ಕಾರ್ಮಿಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ  ಕಾರ್ಖಾನೆ ಯೊಂದರ ಸುಪರ್‌ವೈಸರ್ ಅವರು ವಾಸಿಸುತ್ತಿದ್ದ ಕೊಠಡಿಯೊಳಗೆ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ  ಕಾರ್ಯವೆಸಗುತ್ತಿರುವ ಸ್ಟಾಂಡರ್ಡ್ ಗ್ರೀನ್ ಎನರ್ಜಿ ಎಂಬ ಕಾರ್ಖಾನೆಯ ಕಾರ್ಮಿಕ ಒಡಿಸ್ಸಾ ಮುಂಡ  ಖಾಮಾರಿ ನಿವಾಸಿ ಗ್ರಾಟಸ್ ಎಂಬವರ  ಪುತ್ರ  ಸ್ಯಾಮುವೆಲ್  ಟೋಪೋ (43)  ಈ ಕಾರ್ಖಾನೆಯ  ಕಾರ್ಮಿಕರು ವಾಸಿಸುತ್ತಿರುವ ಕೊಠಡಿಯಲ್ಲಿ ನಿನ್ನೆ  ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಪ್ರಸ್ತುತ ಕಾರ್ಖಾನೆಯ ಸುಪರ್ ವೈಸ್ ಶೇಣಿ ಅರಿಯಪ್ಪಾಡಿ ಪಜ್ಜಿಕಟ್ಟೆಯ ಮೊಹಮ್ಮದ್ ಸಿದ್ದಿಕ್ ಸೇರಿ ಇತರರು ಸ್ಯಾಮುವೆಲ್‌ನನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸಾಗಿಸಿದರು.  ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಸಾಮ್ಯು ವೆಲ್ ಸಾವನ್ನಪ್ಪಿರುವುದಾಗಿ ದೃಢೀಕರಿ ಸಿದ್ದಾರೆ.  ಈ ಬಗ್ಗೆ  ಸುಪರ್‌ವೈಸರ್ ಮೊಹ ಮ್ಮದ್ ಸಿದ್ದಿಕ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ  ಲಭಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page