ಕುಂಬಳೆ: ಕೇಳಿದ ಸಾಮಾನು ನೀಡಿಲ್ಲವೆಂಬ ದ್ವೇಷದಿಂದ ಅಂಗಡಿಗೆ ಹಾನಿಗೈದ ಪ್ರಕರಣದಲ್ಲಿ ತಂದೆ, ಮಕ್ಕಳ ಸಹಿತ ನಾಲ್ಕು ಮಂದಿ ವಿರುದ್ಧ ಹತ್ಯೆ ಯತ್ನ ಕೇಸು ದಾಖಲಿಸಿ ಅವರನ್ನು ಬಂಧಿಸಲಾಗಿದೆ.
ಪೇರಾಲ್ ನಿವಾಸಿ ಸದಾಶಿವ (48), ಮಕ್ಕಳಾದ ಶ್ರವಣ್‌ರಾಜ್ (21) ಸುದರ್ಶನ್ (25), ಸಂಬಂಧಿಕ ಶರತ್ ಕುಮಾರ್ (26) ಎಂಬಿವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಸೆರೆಹಿಡಿದಿದೆ. ಕಳೆದ ಶನಿವಾರ ಸಂಜೆ 7.30ರ ವೇಳೆ ಮೊಗ್ರಾಲ್ ಪೇರಾಲ್‌ನ ಸಿ.ಎಂ. ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಆರೋಪಿಗಳು ಹಾನಿ ಗೊಳಿಸಿದ್ದಾರೆಂದು ದೂರಲಾಗಿದೆ. ಅಲ್ಲದೆ ಅಂಗಡಿ ಮಾಲಕ ಪೇರಾಲ್‌ನ ಅಬ್ದುಲ್ ರಹ್ಮಾನ್ (26), ಸಹೋದರ ಬಿ.ಎಂ.ರಿಫಾಯಿ (19) ಎಂಬಿವರಿಗೆ ಹಲ್ಲೆಗೈದು ಗಾಯಗೊಳಿಸಿ ಬೆದರಿಕೆಯೊಡ್ಡಿ ದ್ದಾರೆನ್ನಲಾಗಿದೆ. ಆರೋಪಿಗಳು ನಡೆಸಿದ ದಾಳಿಯಿಂದ 25,೦೦೦ ರೂಪಾಯಿಗಳ ಸಾಮಗ್ರಿಗಳು ನಾಶಗೊಂಡಿವೆಯೆಂದು ದೂರಲಾಗಿದೆ.
ಈ ವೇಳೆ ಸೆರೆಗೀಡಾದ ಆರೋಪಿ ಗಳನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈ ವೇಳೆ ಸದಾಶಿವ, ಸುದರ್ಶನ್, ಶರತ್ ಕುಮಾರ್ ಎಂಬಿವರಿಗೆ ರಿಮಾಂಡ್ ವಿಧಿಸಲಾಗಿದೆ. ಶ್ರವಣ್‌ರಾಜ್‌ಗೆ ಜಾಮೀನು ನೀಡಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.







