ಮಂಗಲ್ಪಾಡಿ: ಇಚ್ಲಂಗೋಡು ಬಳಿಯ ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಥಮ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ಸೀತಾರಾಮ ಪಂಜತೊಟ್ಟಿ ಅಧ್ಯಕ್ಷತೆ ವಹಿಸಿದರು. ಡಾ.ಅಭಿಲಾಷ್ ಮಯ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹರಿನಾಥ ಭಂಡಾರಿ ಮುಳಿಂಜ, ಕಾಂಚಾರ ಅಮ್ಮಂಗೋಡು, ಭಾಸ್ಕರ್ ಅಯ್ಯ ಉಬರಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರ ರಚನೆಗಾರ ಮತ್ತು ಶಿಲ್ಪಿ ಕಿರಣ್ ಕುಮಾರ್ ಚೆರುಗೋಳಿ ಇವರನ್ನು ಸನ್ಮಾನಿಸಲಾಯಿತು. ಆಶಿಕ ಮತ್ತು ಬಳಗ ಪ್ರಾರ್ಥನೆ ಹಾಡಿದರು. ರಾಮಚಂದ್ರ ಬಲ್ಲಾಳ್ ನಿರೂಪಿಸಿದರು. ಕೃಷ್ಣ ಸ್ವಾಗತಿಸಿ, ಕೃಷ್ಣಪ್ರಸಾದ್ ವಂದಿಸಿದರು.






