ಕುಂಬಳೆ: ಕೆ.ಎಸ್. ಟಿ. ಎ. ಕುಂಬಳೆ ಯೂನಿಟ್ ಸಮ್ಮೇಳನ ಕುಂಬಳೆ ಪೈ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ವಿನೋದ್ ಯು ಅಧ್ಯಕ್ಷರು ವಹಿಸಿದರು. ಮೊಹನ್ ದಾಸ್ ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಸುರೇಶ್ ಭಟ್, ಬಾಲಕೃಷ್ಣ ಮತ್ತು ಸತೀಶ್ ಆಚಾರ್ಯ ಭಾಗವಹಿಸಿದ್ದರು.
ಹಲವು ವರ್ಷಗಳಿಂದ ಕುಂಬಳೆಯಲ್ಲಿ ಟೈಲರ್ ವೃತ್ತಿಯಲ್ಲಿ ಇರುವ ಇಬ್ಬರಾದ ಲಕ್ಷ್ಮಿ ಭಟ್ ಸೂರಂಬೈಲ್ ಬಿಜೆಪಿ ಅಭ್ಯರ್ಥಿಯಾಗಿ ಹಾಗು ಬಾಲಕೃಷ್ಣ ರೈ ಪುತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಳೀಯಾಡಳಿ ತ ಚುನಾವಣೆಯಲ್ಲಿ ಪುತ್ತಿಗೆ ಪಂಚಾಯತ್ ನಲ್ಲಿ ಜಯಗಳಿಸುರುತ್ತಾರೆ ಇವರನ್ನು ಅಭಿನಂದಿಸಲಾಯಿತು.
ನೂತನ ಸಮಿತಿಗೆ ಅಧ್ಯಕ್ಷರಾಗಿ ಲತೇಶ್ ಕಾರ್ಲೆ , ಉಪಾಧ್ಯಕ್ಷರಾಗಿ ಚಿಕ್ಕಪು ರೈ , ನಾರಾಯಣ ಬನ್ನಂಗಳ, ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಕೆ, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ರೈ, ಮತ್ತು ಭರತ್ ಕುಂಬ್ಳೆ , ಕೋಶಾಧಿಕಾರಿಯಾಗಿ ಶಶಿಕಲಾ ,ಸದಸ್ಯರಾಗಿ ಮೋಹನ್ ದಾಸ್, ರಾಮ ಪೊಯ್ಯಕoಡ, ನಾರಾಯಣ ದೇವಿನಗರ್, ಸಂಕಪ್ಪ ಗಟ್ಟಿ, ಬಾಲಕೃಷ್ಣ ಕುಂಬಳೆ, ವಿನೋದ್ ಯು, ಚೇತನ್ ಶೆಟ್ಟಿ, ಸುಬ್ಬ ಪಾಟಾಳಿ ಮತ್ತು ಲೇಖಾ ಎಸ್ ಆಯ್ಕೆಯಾದರು. ಭರತ್ ವಂದಿಸಿದರು.







