ಬದಿಯಡ್ಕ: ಜೀರ್ಣೋದ್ಧಾರಗೊ ಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ. ನವೀನ್ ಕುಮಾರ್ ಎಸ್.ಕೆ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ, ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡುವುದಾಗಿ ಅವರು ಭರ ವಸೆ ನೀಡಿದರು. ದೇವಳದ ಹೊರಾಂ ಗಣದ ಎದುರುಭಾಗದ ಕಲ್ಲು ಹಾಸುವ ಮತ್ತು ಸುತ್ತಲಿನ ಇಂಟರ್ ಲಾಕ್ ಹಾಕಿಸುವ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಉಪಸ್ಥಿತರಿದ್ದರು.







