ಕಾಸರಗೋಡು: ಕಿರುಕುಳಕ್ಕೊಳ ಗಾಗುವವರೊಂದಿಗೆ ಸರಕಾರ ಹಾಗೂ ಕಾಮ್ರೇಡ್‌ಗಳು ಇದ್ದಾರೆಂದು ಪದೇ ಪದೇ ತಿಳಿಸುತ್ತಿರುವಾಗ ವಿವಾಹಿ ತೆಯೂ ಪ್ರಬುದ್ಧರಾದ ಮಕ್ಕಳಿರುವ 50ರ ಹರೆಯದ ಗೃಹಿಣಿಯನ್ನು ಓರ್ವ ಕಾಮ್ರೇಡ್ 30 ವರ್ಷಗಳಿಂದ ಹಿಂಬಾಲಿಸಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಿರುವುದಾಗಿ ಕಾಸರಗೋಡಿನ ಗೃಹಿಣಿ ರಾಜ್ಯ ಪೊಲೀಸ್ ಡೈರೆಕ್ಟರ್ ಜನರಲ್‌ಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಎದುರು ಕಕ್ಷಿಯ ಲೈಂಗಿಕ ಚೇಷ್ಠೆಗಳು ಒಳಗೊಂಡ ವೀಡಿಯೋ ಹಾಗೂ ಶಬ್ದ ಸಂದೇಶ ಒಳಗೊಂಡ ಪೆನ್‌ಡ್ರೈವ್ ನೀಡಿರುವುದಾಗಿ ತಿಳಿಸಲಾಗಿದೆ.
2025 ಡಿಸೆಂಬರ್ 31ರಂದು ತಿರುವನಂತಪುರ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಅಧಿಕಾರಿಗಳು ದೂರು ಸ್ವೀಕರಿಸಿದ್ದಾರೆ. ದೂರಿನ ಪ್ರತಿಯನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ.ಕುಂಬಳೆ ಪೊಲೀಸರಿಗೆ ಈ ಹಿಂದೆ ಈ ಕುರಿತಾಗಿ ದೂರು ನೀಡಿರುವುದಾಗಿ ಡಿಜಿಪಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅವರು ಅದನ್ನು ಈಗಲೂ ಮುಚ್ಚಿಟ್ಟುಕೊಂಡಿದ್ದಾರೆಂದೂ ದೂರಲಾಗಿದೆ. ಇದೇ ವೇಳೆ ಪಂಚಾಯತ್ ಚುನಾವಣೆಯ ಅಲ್ಪ ಮುಂಚೆ ಅಭ್ಯರ್ಥಿಯಾದ ಎದುರುಕಕ್ಷಿ ದೂರುದಾತೆ ತನಗೆ ಬೆದರಿಕೆ ಪತ್ರ ಕಳುಹಿಸಿ ಬ್ಲಾಕ್ ಮೈಲ್ ಮಾಡುತ್ತಿರುವುದಾಗಿ ಪೊಲೀಸರ ಮತ್ತೊಂದು ವಿಭಾಗಕ್ಕೆ ದೂರು ನೀಡಿದ್ದನು. ಅದರ ಆಧಾರದಲ್ಲಿ ಆ ವಿಭಾಗ ತನ್ನನ ಕರೆಸಿ ದೂರಿನಲ್ಲಿ ತಿಳಿಸಿರುವುದು ಸತ್ಯವೆಂದು ಒಪ್ಪಬೇಕೆಂದು ಬೆದರಿಕೆಯೊಡ್ಡಿ ರುವುದಾ ದೂರುದಾತೆ ತಿಳಿಸಿದ್ದಾರೆ. ದೂರನ್ನು ಪೊಲೀಸರು ಓದಿ ಕೇಳಿಸಿದ್ದಾರೆ. ಅದರಲ್ಲಿ ಹಲವು ಸತ್ಯಗಳಿವೆ. ಆದರೆ ಆ ದೂರು ತಾನು ಬರೆದಿಲ್ಲವೆಂದು ತಾನು ಪುನರಾವರ್ತಿಸಿದಾಗ ಹಾಗಾದರೆ ಅನುಭವಿಸಿಕೋ ಎಂದು ಪೊಲೀಸ್ ಪ್ರತಿಕ್ರಿಯಿಸಿರುವುದಾಗಿ ಹೇಳಲಾಗುತ್ತಿದೆ.
ಎದುರುಕಕ್ಷಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯಾಗಿದ್ದಾನೆಂದೂ ಆತನಿಗೆ ಏನು ಬೇಕಾದರೂ ಮಾಡುವ ಭೂಗತ ತಂಡ ಈಗಲೂ ಇದೆಯೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆಂದು ದೂರುದಾತೆ ತಿಳಿಸಿದ್ದಾರೆ. ಸಿಪಿಎಂನ ಪ್ರಮುಖ ನೇತಾರನೂ, ಪಂಚಾಯತ್ ಸದಸ್ಯನೂ, ಪ್ರಾಥಮಿಕ ಶಾಲೆಯೊಂದರ ಅಧ್ಯಾಪಕನೂ ಆಗಿರುವ ಎದುರುಕಕ್ಷಿ ಶಾಲೆ ಬಳಿಯಿರುವ ತನ್ನ ತಾಯಿಯ ಅಂಗಡಿ ಸಮೀಪಕ್ಕೆ ನಿರಂತರ ತಲುಪುತ್ತಿದ್ದನೆಂದೂ ಅಂದು ಅಂಗಡಿಯಲ್ಲಿ ಸಹಾಯಕಿಯಾಗಿದ್ದ ತನ್ನೊಂದಿಗೆ ಹತ್ತಿರದ ಸಂಬಂಧ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅದನ್ನು ತಿಳಿದ ಮನೆಯವರು ಬೇರೊಬ್ಬನೊಂದಿಗೆ ತನ್ನ ಮದುವೆ ಮಾಡಿಸಿದರು. ಅನಂತರ ಪತಿಯನ್ನು ಉಪೇಕ್ಷಿಸಬೇಕೆಂದೂ ಇಲ್ಲದಿದ್ದಲ್ಲಿ ಆತನನ್ನು ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ್ದಾನೆ. ಬೆದರಿಕೆ ಹಾಗೂ ಕಿರುಕುಳ ಅಹನೀಯವಾದಾಗ ಕೇರಳದಿಂದ ಕರ್ನಾಟಕಕ್ಕೆ ವಾಸ ಬದಲಿಸಿದ್ದೇನೆ. ಎದುರುಕಕ್ಷಿ ಅಲ್ಲಿಗೂ ತಲುಪಿ ನೀನು ತನಗೆ ಬೇಕೆಂದು ತಿಳಿಸಿ ದ್ದನು. ಹಲವು ಬಾರಿ ಈ ಬೇಡಿಕೆ ಮುಂದರಿಸಿದ್ದಾನೆ. ಈ ಮಧ್ಯೆ ತಾಯಿಗೆ ಅಸೌಖ್ಯ ಬಾಧಿಸಿದಾಗ ಮರಳಿ ಮನೆಗೆ ತಲುಪಿದೆ. ಆಗ ನೇರವಾಗಿಯೂ, ಫೋನ್ ಮೂಲಕವೂ ಈತ ನಿರಂತರ ಸಂಪರ್ಕಿಸುತ್ತಿದ್ದನು. ಶಾರೀರಿಕ ಸಂಬಂಧಕ್ಕೆ ಒಪ್ಪಬೇಕೆಂದು ಆತ ಒತ್ತಾಯಿಸಿದ್ದನು. ಆತನ ಛಪಲವನ್ನು ತಿಳಿಸಿ ವಾಟ್ಸಪ್‌ನಲ್ಲಿ ಕಳುಹಿಸುತ್ತಿದ್ದನು. ಇತರ ಯುವತಿಯರಿಗೆ ಕಿರುಕುಳ ನೀಡುವ ದೃಶ್ಯವೂ ಅದರೊಂದಿಗಿತ್ತು. ಆತನ ವಿಕೃತಿಗಳನ್ನು ನಿರಂತರ ಲೈವ್ ವೀಡಿಯೋ ಮೂಲಕ ಪ್ರದರ್ಶಿಸುತಿ ದ್ದನು. ಒಮ್ಮೆ ಮನೆ ಬಳಿಯ ಬ್ಯಾಂಕ್‌ಗೆ ಹೋದಾಗ ಆರೋಪಿ ಕಾರನ್ನು ಸಮೀಪಕ್ಕೆ ತಂದು ನಿಲ್ಲಿಸಿ ಹತ್ತುವಂತೆ ಒತ್ತಾಯಿಸಿದ್ದಾನೆ. ಪರಿಸರದಲ್ಲಿದ್ದ ಜನರು ಗಮನಿಸುವುದನ್ನು ಕಂಡು ಕಾರಿಗೆ ಹತ್ತಬೇಕಾಗಿ ಬಂತು. ಕಾರನ್ನು ಪೇಟೆ ಸಮೀಪ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ತನ್ನ ಗುಪ್ತಾಂಗವನ್ನು ಸ್ಪರ್ಶಿಸಿದ್ದಾನೆ. ಲೈಂಗಿಕ ಕಿರುಕುಳ ನೀಡುವ ಹಂತಕ್ಕೆ ತಲುಪಿದಾಗ ತಾನು ಬೊಬ್ಬೆ ಹಾಕುವುದಾಗಿಯೂ ತಾಕೀತು ನೀಡಿದ್ದಾಳೆ. ಕೂಡಲೇ ತನ್ನನ್ನು ಕಾರಿನಲ್ಲಿ ಬ್ಯಾಂಕ್‌ನ ಸಮೀಪಕ್ಕೆ ತಲುಪಿ ದ್ದಾನೆ. ಅನಂತರ ಬೇರೊಂದು ದಿನ ತಾನು ಸ್ಕೂಟರ್‌ನಲ್ಲಿ ಪೇಟೆಗೆ ಹೋಗುತ್ತಿದ್ದಾಗ ಮುಖವಾಡ ಧರಿಸಿ ಇಬ್ಬರು ಸ್ಕೂಟರ್‌ಗೆ ತಡೆಯೊಡ್ಡಿದ್ದರು. ಅವರಲ್ಲೋರ್ವ ಮಾಸ್ತರ್ ಯಾರೆಂದು ತಿಳಿಯದಿದ್ದರೆ ನಿನಗೆ ಅದನ್ನು ತಿಳಿಸುವುದಾಗಿ ತನ್ನನ್ನು, ಪತಿಯನ್ನು ಹಾಗೂ ಕುಟುಂಬವನ್ನು ಕೊಲ್ಲುವುದಾ ಗಿಯೂ, ನಮಗೆ ಏನೂ ಸಂಭವಿಸ ದೆಂದೂ ಸಂರಕ್ಷಿಸಲು ಎಲ್ಲಾ ಕಡೆ ಜನರಿದ್ದಾರೆಂದು ತಾಕೀತು ನೀಡಿದ್ದಾನ. ಎದುರುಕಕ್ಷಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸ ಅನುಭವಿಸಿದಾಗ ಸಮಾಧಾನವಾಗಿತ್ತು. ಆದರೆ ಆತ ಬಿಡುಗಡೆಗೊಳ್ಳುವ ಎರಡು ದಿನಗಳ ಹಿಂದೆ ಕೆಲವೇ ದಿನಗಳೊಳಗೆ ತಾನು ಜೈಲಿನಿಂದ ಬಿಡುಗಡೆಗೊಳ್ಳು ವುದಾಗಿಯೂ ಜೈಲಿನಿಂದ ಬಂದರೆ ನೇರವಾಗಿ ನಿನ್ನ ಸಮೀಪಕ್ಕೆ ಬರುವುದಾಗಿ ತನ್ನೊಂದಿಗೆ ಸಹಕರಿಸಲು ಸಿದ್ಧಳಾಗಿರು ಎಂದು ತಿಳಿಸಿದ್ದನು.ಊರಿಗೆ ಬಂದ ಬಳಿಕ ಆತನ ಫೋನ್‌ನಿಂದ ಆತನ ನಗ್ನ ವೀಡಿಯೋವನ್ನು ತನ್ನ ಫೋನ್‌ಗೆ ಕಳುಹಿಸಿಕೊಟ್ಟನು. ಬಳಿಕ ಯುವತಿ ಯೊಂದಿಗಿನ ರತಿ ಕ್ರೀಡೆಗಳ ವೀಡಿ ಯೋ ಕಳುಹಿದ್ದಾನೆ. ಅದರೊಂದಿಗೆ ಆತನ ಸ್ವಯಂಭಗದ ವೀಡಿ ಯೋಗಳನ್ನು ಕಳುಹಿಸಿಕೊಟ್ಟು ನಿರಂತರ ತನಗೆ ಕಿರುಕುಳ ನೀಡುತ್ತಿದ್ದನು. ಇಂತಹ ನಿನ್ನ ನಗ್ನ ವೀಡಿಯೋವನ್ನು ಕಳುಹಿಸಿಕೊಡಬೇಕೆಂದು ಆತ ಆಗ್ರಹಪಟ್ಟನು. ಅನಂತರ ಆತನ ಫೋನ್ ಕರೆ ಸ್ವೀಕರಿಸದಿದ್ದಾಗ ನಿನ್ನ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವುದಾಗಿ ಬೆದರಿಕೆಯೊಡ್ಡಿದ್ದನು. ಈ ವಿಷಯವನ್ನು ಮೊದಲು ಪಕ್ಷದ ಓರ್ವ ಪ್ರಾದೇಶಿಕ ನೇತಾರನಿಗೆ ತಿಳಿಸಿದೆ. ಆತ ಪೊಲೀಸರಿಗೆ ದೂರು ನೀಡುವಂತೆಯೂ ಅದಕ್ಕೆ ಪಕ್ಷದ ಎಲ್ಲಾ ಸಹಾಯವೊದಗಿಸುವುದಾಗಿ ತಿಳಿಸಿದರು. ದೂರು ನೀಡಿದರೆ ಪತಿ ಹಾಗೂ ಮಕ್ಕಳು ಅನುಭವಿಸಬೇಕಾಗಿ ಬರುವ ಅವಮಾನವನ್ನು ನೆನಪಿಸಿ ಅದಕ್ಕೆ ಸಿದ್ಧವಾಗಿಲ್ಲ. ಅನಂತರ ಮುತ್ತಪ್ಪನ್ ದೈವಕೋಲ ವೇಳೆ ದೈವದೊಂದಿಗೆ ತನ್ನ ಸಮಸ್ಯೆಯನ್ನು ಕೂಗಿ ತಿಳಿಸಿದೆನು. ಅದನ್ನು ಕಂಡ ಕಾಮ್ರೇಡ್‌ಗಳು ಆವಾಗಲೂ ದೂರು ನೀಡುವಂತೆ ತಿಳಿಸಿದರು. ಅನಂತರವೂ ಕಿರುಕುಳ ನಿರಂತರ ಆವರ್ತಿಸಿದುದರಿಂದ ಪೊಲೀಸರಿಗೆ ದೂರು ನೀಡಿದೆ. 30 ವರ್ಷ ಪ್ರಾಯವುಳ್ಳ ಗಂಡು ಮಕ್ಕಳು, ಪತಿ ಹಾಗೂ 50 ವರ್ಷ ಪ್ರಾಯದ ತನ್ನ ಕುರಿತು ನಾಡಿನಲ್ಲಿ ಅಪಪ್ರಚಾರ ಉಂಟಾಗಬಹುದೆಂಬ ಭಯದಿಂದ ಎಲ್ಲ್ಲಾ ಮಾಹಿತಿಗಳನ್ನು ದೂರಿನಲ್ಲಿ ತಿಳಿಸಿಲ್ಲ. ದೂರು ನೀಡಿದ ಬಳಿಕ ಅದನ್ನು ಹಿಂತೆಗೆಯಲು ಎದುರುಕಕ್ಷಿ ಮತ್ತೆಯೂ ಬೆದರಿಕೆಯೊಂದಿಗೆ ರಂಗಕ್ಕಿಳಿದನು. ತನ್ನ ಜೀವಕ್ಕೆ ಯಾರು ಭದ್ರತೆಯನ್ನು ಒದಗಿಸುವರೆಂಬ ಭಯ ಈಗ ಕಾಡುತ್ತಿದೆ. ಕಿರುಕುಳಕ್ಕೊಳಗಾಗುವವರೊಂದಿಗೆ ಸರಕಾರ ಹಾಗೂ ಕಾಮ್ರೇಡ್‌ಗಳು ಇದ್ದಾರೆಂದು ನೆಮ್ಮದಿಪಡುವಾಗ ಈಗ ಎದುರುಕಕ್ಷಿಯಿಂದ ಉಂಟಾಗುವ ಬೆದರಿಕೆಗಿಂತ ಹೆಚ್ಚು ಭಯದ ಅನುಭವವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸ್ವಾಭಾವಿಕ ನ್ಯಾಯವಾದರೂ ತನಗೆ ಹಾಗೂ ಕುಟಂಬಕ್ಕೆ ಒದಗಿಸಬೇಕೆಂದು ಡಿಜಿಪಿಯೊಂದಿಗೆ ಗೃಹಿಣಿ ವಿನಂತಿಸಿದ್ದಾರೆ.







