ಕಾಸರಗೋಡು: ಎಸ್‌ಐಆರ್ ಜ್ಯಾರಿಗೊಳಿಸಿದುದರಿಂದ ಸಿಪಿಎಂ ಕೇಂದ್ರಗಳಲ್ಲಿ ಸಹಿತ ಇತರೆಡೆಗಳಲ್ಲಿ ನಕಲಿ ಮತಗಳನ್ನು ತೆಗೆದುಹಾಕಲು ಸಾಧ್ಯವಾಯಿತು ಎಂಬ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್‌ರ ಹೇಳಿಕೆ ಸ್ವಾಗತಾರ್ಹವೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿ ದ್ದಾರೆ. ಇದುವರೆಗೆ ಕೇಂದ್ರ ಚುನಾವಣಾ ಆಯೋಗದ ಎಸ್ ಐಆರ್ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಇದರಿಂದ ಎಸ್‌ಐಆರ್ ಕುರಿತು ಕಾಂಗ್ರೆಸ್ ನಡೆಸಿದ ಅಪಪ್ರಚಾರ ತಪ್ಪು ಎಂದು ಸಾಬೀತು ಗೊಂಡಿದೆ. ಆದ್ದರಿಂದ ಯುಡಿಎಫ್ ಮಾಡಿದ ಅಪಪ್ರಚಾರ ಕ್ಕಾಗಿ ಅದರ ನೇತಾರರು ಜನರಲ್ಲಿ ಕ್ಷಮೆ ಯಾಚಿಸ ಬೇಕೆಂದು ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಡಿಸಿಸಿ ಅಧ್ಯಕ್ಷ ಫೈಸಲ್‌ರ ಹೇಳಿಕೆ ಬಗ್ಗೆ ಮುಸ್ಲಿಂ ಲೀಗ್ ಮತ್ತು ಸಿಪಿಎಂ ಸೇರಿದಂತೆ ಇಂಡ್ಯ ಮೈತ್ರಿಕೂಟದ ಭಾಗವಾಗಿರುವ ಇತರ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸ ಬೇಕೆಂದೂ ಶ್ರೀಕಾಂತ್ ಒತ್ತಾಯಿಸಿದ್ದಾರೆ.







