ಬದಿಯಡ್ಕ: ಆಟದ ಮೈದಾನವನ್ನು ಅಳೆದು ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಸಿ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಲಾಗಿದೆ. ಬೇಳ ವಿಲ್ಲೇಜ್‌ನ ಏಣಿಯರ್ಪ್‌ನಲ್ಲಿ ಮೂರು ದಶಕಗಳ ಕಾಲ ಉಪಯೋಗಿಸುತ್ತಿದ್ದ ಆಟದ ಮೈದಾನವನ್ನು ಕೆಲವು ದಿನಗಳ ಹಿಂದೆ ಬೇಳ ವಿಲ್ಲೇಜ್ ಆಫೀಸರ್ ಅಳತೆ ಮಾಡಿ ಗುರುತು ಹಾಕಲು ತಲುಪಿದ್ದರು. ಪರಿಸರದ ಯುವಕರು ಸೇರಿ ವಿಶ್ವಭಾರತಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ರೂಪೀಕರಿಸಿ ಸ್ಥಳೀಯ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಸ್ಥಳವಾಗಿದೆ ಇದು. ಈ ಸ್ಥಳವನ್ನು ಈಗ ಅಳೆದು ನೀಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು ತಡೆಯಬೇಕೆಂದು ವಾರ್ಡ್ ಪ್ರತಿನಿಧಿ ಅಶ್ವತಿ ಅಶೋಕ್‌ರ ನೇತೃತ್ವದಲ್ಲಿ ಕ್ಲಬ್ ಪದಾಧಿಕಾರಿಗಳು ಪಂ. ಅಧ್ಯಕ್ಷ ಡಿ. ಶಂಕರ್‌ರಿಗೆ ಮನವಿ ನೀಡಿದರು.







