ಮಂಗಲ್ಪಾಡಿ: ಮಂಗಲ್ಪಾಡಿ ಪ್ರತಾಪ ನಗರ ನಿವಾಸಿ ಮಂಗಳೂರಿನ ಊರ್ವಸ್ಟೋರ್‌ನಲ್ಲಿ ವಾಸವಾಗಿರುವ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ವಸಂತ ಕುಮಾರ್ (68) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರು ಮಂಗಳೂರಿನಲ್ಲಿ ಬಿಎಸ್ ಎನ್‌ಎಲ್ ನಿವೃತ ಸೀನಿಯರ್ ಸೂಪರಿಂಟೆಂಡೆಂಟ್ ಆಗಿದ್ದರು. ಯಕ್ಷಕಲಾ ಭಾರತಿ ಮಂಗಲ್ಪಾಡಿ ಇದರ ಸದಸ್ಯರಾಗಿ ದ್ದುಕೊಂಡು ಯಕ್ಷಗಾನ, ತಾಳಮದ್ದಳೆ ಯಲ್ಲಿ ಸಕ್ರಿಯರಾಗಿದ್ದರು. ನಾಟಕ ರಂಗ ದಲ್ಲಿ, ಕೋಟಿ ಚೆನ್ನಯ್ಯ ಧಾರವಾಹಿ ಯಲ್ಲೂ ಪಾತ್ರ ಮಾಡಿದ್ದರು. ದಿ| ಆನಂದ ಮಾಸ್ತರ್ -ದಿ| ಲಕ್ಷ್ಮೀ ದಂಪತಿ ಪುತ್ರನಾ ಗಿದ್ದಾರೆ. ಮೃತರು ಪತ್ನಿ ನಳಿನಾಕ್ಷಿ, ಮಕ್ಕ ಳಾದ ವಿಖ್ಯಾತ್, ವೈಶಾಲಿ, ಸಹೋದರ ಸಹೋದರಿಯರಾದ ಬಾಲ ಚಂದ್ರ (ಕರ್ನಾಟಕದಲ್ಲಿ ನಿವೃತ್ತ ಹೆಲ್ತ್ ಇನ್ಸ್ಫೆಕ್ಟರ್), ಜಗದೀಶ್ ಕುಮಾರ್ ಮಂಗಲ್ಪಾಡಿ, ವೇದಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರಿ ಉಷಾ ಚಂದ್ರಿಕಾ ಈ ಹಿಂದೆ ನಿಧನರಾ ಗಿದ್ದಾರೆ. ಅಂತ್ಯಸAಸ್ಕಾರ ಪ್ರತಾಪನಗರ ಮನೆ ಪರಿಸರದಲ್ಲಿ ನಿನ್ನೆ ಮಧ್ಯಾಹ್ನ ನಡೆಯಿತು.







