ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಕಾಣಿಕೆ ಹುಂಡಿಯಿಂದ ಹಣ ಕಳವು ನಡೆದ ಬಗ್ಗೆ ವರದಿಯಾಗಿದೆ. ಎರಡು ದಿನಗಳ ಹಿಂದೆ ಈ ಕಳವು ನಡೆದಿದೆ. ಕ್ಷೇತ್ರದ ಪ್ರವೇಶದ್ವಾರದ ಬಳಿಯಿರುವ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಎರಡು ದಿನಗಳ ಹಿಂದೆ ಹುಂಡಿಯಿಂದ ಹಣ ತೆಗೆಯಲೆಂದು ದೇವಸ್ಥಾನ ಸಮಿತಿಯವರು ಅಲ್ಲಿಗೆ ಹೋದಾಗ ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಅದರಿಂದ ಎಷ್ಟು ಹಣ ಕಳವಿಗೀಡಾಗಿದೆಯೆಂದು ಖಚಿತವಾಗಿ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಕ್ಷೇತ್ರ ಸಮಿತಿಯವರು ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಕ್ಷೇತ್ರದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳರ ದೃಶ್ಯ ಸೆರೆಯಾಗಿದೆಯೇ ಎಂದು ತಿಳಿಯಲು ಪ್ರಯತ್ನ ನಡೆಯುತ್ತಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.







