ಮುಳ್ಳೇರಿಯ: ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಹೌಸ್ ನಿವಾಸಿ ಜಿ. ಭಾಸ್ಕರ ಎಂಬವರ ಪುತ್ರ ರಾಜೇಶ್ ಜಿ. (47) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ಸಂಜೆ ಅವರ ಮನೆ ಆವರಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಕಂಡ ಸ್ನೇಹಿತ ತಕ್ಷಣ ಮುಳ್ಳೇರಿಯ ಕೋ-ಆಪರೇಟಿವ್ ಆಸ್ಪತ್ರೆಗೆ ಸಾಗಿಸಿ ವೈದ್ಯರು ತಪಾಸಣೆ ನಡೆಸಿದಾಗ ರಾಜೇಶ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.







